Monday, November 25, 2024
ಸುದ್ದಿ

ವರುಣನ ಆರ್ಭಟಕ್ಕೆ ನಲುಗಿದ ಸಂತೃಸ್ತರಿಗೆ ಅಲ್ ಸಾದ್ ವೆಲ್ಫೇರ್ ಅಸೋಸಿಯೇಷನ್ ನಿಂದ ನೆರವು – ಕಹಳೆ ನ್ಯೂಸ್

ಮಂಗಳೂರು ; ವರುಣನ ಆರ್ಭಟಕ್ಕೆ ಕರ್ನಾಟಕದ ಬಹುಭಾಗದ ಜನತೆ ಸೂರಿಲ್ಲದೆ ಆಸರೆಯನ್ನು ಕಳೆದುಕೊಂಡಿದೆ. ಉತ್ತರದಿಂದ ದಕ್ಷಿಣದವರೆಗೆ ಮಳೆಯ ರೌದ್ರನರ್ತನಕ್ಕೆ ಜನ ದಿಕ್ಕಾಪಾಲಾಗಿದ್ದಾರೆ. ಕರಾವಳಿಯಲ್ಲೂ ಸುರಿದ ಭಾರಿ ಮಳೆಯಿಂದಾಗಿ ಬಡ ಮಧ್ಯಮ ಕುಟುಂಬದ ಮನೆಗಳು ನೀರುಪಾಲಾಗಿದ್ದವು. ಎಡೆಬಿಡದೆ ಸುರಿಯುತ್ತಿದ್ದ ಮಳೆರಾಯ ಕೊಂಚ ವಿರಮಿಸುತ್ತಿದ್ದಾನೆ. ನಿರಾಶ್ರಿತರು ಎಂದಿನಂತೆ ಆಶ್ರಯ ಕೇಂದ್ರಗಳಿಂದ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದಾರೆ. ಆದರೆ ಮನೆಯ ದಿನಬಳಕೆಯ ವಸ್ತುಗಳು ನೀರುಪಾಲಾಗಿದ್ದು ನಿರಾಶ್ರಿತರ ದೈನಂದಿನ ಬದುಕೆ ಈಗ ಪ್ರಶ್ನಾರ್ಹವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನರಿತ ಮಂಗಳೂರು ಜೆಪ್ಪುವಿನ ಯುವಕರ ತಂಡ ಅಲ್ ಸಾದ್ ವೆಲ್ಫೇರ್ ಅಸೋಸಿಯೇಷನ್ (ರಿ) ತಮ್ಮ ಸಂಸ್ಥೆಯ ಧ್ಯೇಯವಾಕ್ಯದಂತೆ ನೊಂದವರ ಬಾಳಿಗೆ ಬೆಂಗಾವಲಾಗಿದೆ. ಸಂರ್ಪೂಣ ನೆರೆಹಾವಳಿಗೆ ಒಳಗಾದ ಅತ್ತಾವರ 55ನೇ ವಾರ್ಡನ ಮಹಾಕಾಳಿ ಪಡ್ಪು, ಜೆಪ್ಪು, ಕುಟ್ಪಾಡಿ, ಜೆಪ್ಪು ಪಟ್ಟಣದ ಪ್ರತಿ ಕುಟುಂಬದ ಮನೆಗಳಿಗೆ ದಿನಬಳಕೆಯ ವಸ್ತುಗಳಾದ ಅಕ್ಕಿ, ಬೆಳೆ, ದವಸ ಧಾನ್ಯ ಸೇರಿದಂತೆ ಸುಮಾರು ಎರಡುವರೆ ಸಾವಿರದ ಅಗತ್ಯ ವಸ್ತುಗಳನ್ನು ಪ್ರತಿ ಮನೆಗೆ ಪೂರೈಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಾತನಾಡಿದ ಅಲ್ ಸಾದ್ ವೆಲ್ಫೇರ್ ಅಸೋಸಿಯೇಷನ್(ರಿ) ಕಮಿಟಿ ಮೆಂಬರ್ ನವಾಝ್ ಜೆಪ್ಪು ಉತ್ತರ ಕರ್ನಾಟಕದ ಜನತೆ ಹಾಗೂ ಸ್ಥಳೀಯ ನಿರಾಶ್ರಿತರಿಗೆ ನಮ್ಮ ಸಂಸ್ಥೆಯಿಂದ ಕೈಲಾದ ಸಹಾಯ ಮಾಡಿದ್ದೇವೆ ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಹಬೀಬ್ ಧರ್ಮ ಭೇದ ಮರೆತು ಮಾನವೀಯತೆ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ನಮ್ಮ ಸಂಸ್ಥೆಯ ಸದಸ್ಯರು ದೇಶ ವಿದೇಶದಲ್ಲೂ ಇದ್ದು ಎಲ್ಲೆಡೆ ಕಷ್ಟದಲ್ಲಿರುವವರಿಗೆ ನೆರವಾಗುವ ಪ್ರಯತ್ನ ಮಾಡುತ್ತೇವೆ ಎಂದರು.

ಇನ್ನು ಸಂಸ್ಥೆಯ ಖಜಾಂಜಿ ಮಹಮ್ಮದ್ ಜಾಸೀಮ್ ಮಾತನಾಡಿ ಕೆಲವು ತಿಂಗಳ ಹಿಂದೆ ಹುಟ್ಟಿಕೊಂಡ ನಮ್ಮ ಸಂಸ್ಥೆ ಉತ್ತರದಿಂದ ದಕ್ಷಿಣದವರೆಗೂ ನೆರೆ ಸಂತ್ರಸ್ಥರಿಗೆ ಸಹಾಯ ಮಾಡಿದೆ. ಇದರ ಜೊತೆ ವಿದ್ಯಾಭ್ಯಾಸ, ಬಡ ಹೆಣ್ಣು ಮಕ್ಕಳ ಮದುವೆ ಸೇರಿದಂತೆ ನಮ್ಮ ಕೈಲಾದ ಅಳಿಲು ಸೇವೆ ಮಾಡಿದ್ದೇವೆ. ದಾನಿಗಳು ಸಂಸ್ಥೆಯ ಉತ್ತಮ ಕೆಲಸಕ್ಕೆ ಸಹಕರಿಸಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಇಸ್ರಾನ್, ಕಾರ್ಯದರ್ಶಿ ಶರಫತ್, ಕಲಂದರ್, ಇಫ್ರಾನ್, ಮುಸ್ತಾಕ್, ಆಶಿಕ್ ಮತ್ತಿತ್ತರು ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಮಾನವೀಯತೆ ದೃಷ್ಟಿಯಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಯುವಕರ ತಂಡ ಎಲ್ಲರಿಗೂ ಮಾದರಿ ಎಂದರೆ ತಪ್ಪಾಗಲಾರದು.