Recent Posts

Monday, November 25, 2024
ರಾಜಕೀಯ

ದಕ್ಷಿಣ ಕನ್ನಡದ ಶಾಸಕರಿಗೆ ಈ ಬಾರಿಯೂ ಸಚಿವ ಸ್ಥಾನ ಭಾಗ್ಯ ಇಲ್ಲ – ಕಹಳೆ ನ್ಯೂಸ್

ಮಂಗಳೂರು: ಅಳೆದೂ ತೂಗಿ ಕೊನೆಗೂ ಬಿಎಸ್ ಯಡಿಯೂರಪ್ಪನವರು ಸಚಿವ ಸಂಪುಟ ರಚನೆಯಾಗಿದೆ. ಆದರೆ ಬರೊಬ್ಬರಿ 7 ಶಾಸಕರನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಗೆ ಒಂದೇ ಒಂದು ಸಚಿವ ಸ್ಥಾನ ಸಿಗದೆ ಯಡಿಯೂರಪ್ಪನವರು ಅನ್ಯಾಯ ಎಸಗಿದ್ದಾರೆ. ನಿನ್ನೆ ತಡರಾತ್ರಿಯವರೆಗೂ ಸುಳ್ಯದ ಶಾಸಕ ಎಸ್.ಅಂಗಾರ ಅವರ ಹೆಸರು ಕೇಳಿ ಬಂದಿತ್ತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹೆಸರು ಆರಂಭದಲ್ಲಿ ಇತ್ತಾದರೂ ಕ್ರಮೇಣ ಬದಿಗೆ ಸರಿದಿತ್ತು. ಈಗ ಎರಡೂ ಹೆಸರು ಮಾಯವಾಗಿದೆ.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮತ್ತೊಮ್ಮೆ ಸಚಿವರಾಗುವ ಅದೃಷ್ಟ ಲಭಿಸಿದೆ. ಕರಾವಳಿ ಭಾಗದ ಎರಡು ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಗಳಿಂದ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿತ್ತು. 13 ವಿಧಾನಸಭಾ ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರಣದಿಂದ ಕರಾವಳಿಗೆ ಕನಿಷ್ಠ 2 ರಿಂದ 3 ಸಚಿವ ಸ್ಥಾನಗಳನ್ನು ನಿರೀಕ್ಷೆ ಜನರಲ್ಲಿತ್ತು. ಅದೀಗ ಸುಳ್ಳಾಗಿದೆ.
ಹಿಂದಿನ ಕಾಂಗ್ರೆಸ್ ಜೆಡಿಸ್ ಮೈತ್ರಿ ಸರಕಾರದಲ್ಲಿ ಕರಾವಳಿ ಭಾಗಕ್ಕೆ ಇಬ್ಬರು ಸಚಿವರಿದ್ದರು. ಕಾಂಗ್ರೆಸ್ ನಿಂದ ಗೆದ್ದಿದ್ದ ಉಳ್ಳಾಲ ಶಾಸಕ ಯು.ಟಿ ಖಾದರ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರೆ, ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಉಡುಪಿಯ ಲೆಕ್ಕದಲ್ಲಿ ಸಚಿವರಾಗಿದ್ದರು. ಹೀಗಾಗಿ ಬಿಜೆಪಿ ಸರ್ಕಾರದಲ್ಲೂ ಕನಿಷ್ಠ 2 ಸಚಿವ ಸ್ಥಾನಗಳನ್ನು ನಿರೀಕ್ಷಿಸಲಾಗಿತ್ತು. ಉಳಿದಂತೆ 16 ಸ್ಥಾನ ಬಾಕಿ ಇವೆ.

ಜಾಹೀರಾತು
ಜಾಹೀರಾತು
ಜಾಹೀರಾತು