Monday, November 25, 2024
ಸುದ್ದಿ

ರವಿವಾರ ತರಗತಿ ಪ್ರಸ್ತಾವಕ್ಕೆ ವ್ಯಾಪಕ ವಿರೋಧ- ಕಹಳೆ ನ್ಯೂಸ್

ಮಂಗಳೂರು: ಮಳೆ ಮತ್ತು ಪ್ರವಾಹದ ಕಾರಣ ಶಾಲೆಗಳಿಗೆ ನೀಡಿದ್ದ ರಜೆಯನ್ನು ಸರಿದೂಗಿಸಲು ರವಿವಾರ ತರಗತಿ ನಡೆಸುವ ಪ್ರಸ್ತಾವಕ್ಕೆ ಶೈಕ್ಷಣಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ.

ಶನಿವಾರ ಅಪರಾಹ್ನವೂ ತರಗತಿ ನಡೆಸುವುದಕ್ಕೆ ಯಾವುದೇ ತಕರಾರು ಇಲ್ಲ ಆದರೆ ರವಿವಾರ ನಡೆಸುವ ಬಗ್ಗೆ ಆಕ್ಷೇಪವಿದೆ ಎಂದು ಮಂಗಳೂರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ’ಸೋಜಾ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರದ 6 ದಿನಗಳಲ್ಲಿ ಪಾಠ ಪ್ರವಚನ ಕೇಳುವ ಮಕ್ಕಳಿಗೆ ವಾರದಲ್ಲಿ ಒಂದು ದಿನವಾದರೂ ವಿಶ್ರಾಂತಿ ಬೇಕಾಗುತ್ತದೆ. 7ನೇ ದಿನವೂ ಪಾಠ ಕೇಳುವುದೆಂದರೆ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಎಂದಿರುವ ಅವರು ಕಳೆದ ವರ್ಷ ಎಲ್ಲ ರಜೆಗಳನ್ನು ಶನಿವಾರ ಭರ್ತಿ ಮಾಡಲಾಗಿತ್ತು. ರವಿವಾರ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಅನೇಕ ಕೌಟುಂಬಿಕ ಸಮಾರಂಭಗಳು ಇರುತ್ತವೆ. ಹಲವು ತಿಂಗಳ ಹಿಂದೆಯೇ ನಿಗದಿಯಾಗಿರುವ ಕೆಲವೊಂದು ಸಭೆ ಸಮಾರಂಭಗಳನ್ನು ಬದಲಾಯಿಸಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ರವಿವಾರ ತರಗತಿ ನಡೆಸಿದರೆ ಮಕ್ಕಳಿಗೆ ಮಾತ್ರವಲ್ಲ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ, ಶಾಲಾ ಆಡಳಿತದ ಮಂದಿಗೆ ಅಂತಹ ಸಮಾರಂಭಗಳಲ್ಲಿ ಭಾಗವಹಿಲು ಅನಾನುಕೂಲವಾಗುತ್ತದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರೀಡಾಪಟುಗಳಾಗಿರುವ ಮಕ್ಕಳಿಗೆ ತರಬೇತಿ ನೀಡಲು ನಮಗೆ ಅವಕಾಶ ಇರುವುದು ರವಿವಾರ ಮಾತ್ರ. ಶಾಲಾ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ತರಗತಿ, ಪ್ರತಿಭಾ ಕಾರಂಜಿ ತರಬೇತಿ ನಡೆಯುತ್ತಿದ್ದು, ಕ್ರೀಡಾ ತರಬೇತಿಗೆ ಅವಕಾಶ ಸಿಗುತ್ತಿಲ್ಲ. ರವಿವಾರವೂ ತರಗತಿ ನಡೆಸಿದರೆ ಕ್ರೀಡಾ ತರಬೇತಿಗೆ ತೊಂದರೆಯಾಗುತ್ತದೆ ಆದ್ದರಿಂದ ರವಿವಾರ ತರಗತಿಗಳು ಬೇಡ ವಿರೋಧ ವ್ಯಕ್ತಪಡಿಸಿದ್ದಾರೆ.