ಕಳೆದ ಕೆಲವು ದಿನದ ಹಿಂದೆ ಉಂಟಾದ ಜಲಪ್ರವಾಹದಲ್ಲಿ, ಮನೆ, ತೋಟ, ಗದ್ದೆ ಸರ್ವಸ್ವವನ್ನೂ ಕಳೆದುಕೊಂಡಿರುವ ನೆರೆ ಸಂತ್ರಸ್ಥರಿಗೆ ಅಗರೀಮಾರ್ ಜಲಜಾಕ್ಷಿ ಅವರು ತನ್ನ ಮನೆಯಲ್ಲೇ ನೆಲೆ, ಆಶ್ರಯ, ಊಟ ಉಪಚಾರ ಮಾಡುತ್ತಿದ್ದಾರೆ.
ಮೊನ್ನೆ ಬೆಳ್ತಂಗಡಿಯ ದಿಡುಪೇ, ಕುಕ್ಕಾವು, ಮಕ್ಕಿ, ದೈಪಿತಿಲು, ಪರ್ಲ ಮುಂತಾದ ಕಡೆ ಮನೆ ಕಳೆದುಕೊಂಡ ಸುಮಾರು 56 ಮಂದಿ ನಿರಾಶ್ರಿತರಿಗೆ ತನ್ನ ಮನೆಯಲ್ಲೇ 10ನೇ ತಾರೀಕಿನಿಂದ ಇಂದಿನವರೆಗೆ ಮತ್ತು ಇನ್ನೂ ಎಷ್ಟು ದಿನಗಳು ಅಂತ ಲೆಕ್ಕ ಹಾಕದೆ ಆಶ್ರಯ ನೀಡುತ್ತಿದ್ದಾರೆ. ಅಗರೀಮಾರ್ ಜಲಜಾಕ್ಷಿ ಎಂಬ ಇವರು ಸಮಾಜದ ಶ್ರೇಷ್ಠ ವ್ಯಕ್ತಿ ಮತ್ತು ಇವರೇ ನಿಜವಾದ ಸೆಲೆಬ್ರಿಟಿ ಆಗಿದ್ದಾರೆ.