Recent Posts

Sunday, January 19, 2025
ಸುದ್ದಿ

ಬಂಟ್ವಾಳದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: 181ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಬಂಟ್ವಾಳ ವಲಯದ ಹಿರಿಯ ಸದಸ್ಯರಾದ ಕನ್ಯಾನ ಬೆನಕಾ ಸ್ಟುಡಿಯೋ ಮಾಲಕ ಕುಮಾರಸ್ವಾಮಿ ದಂಪತಿಗಳಿಗೆ ವಲಯದ ಸದಸ್ಯರ ಪರವಾಗಿ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಹರೀಶ್ ಮಾಣಿ, ಗೌರವಾಧಕ್ಷ ಸುಕುಮಾರ್, ಬಂಟ್ವಾಳ ಕಾರ್ಯದರ್ಶಿ ರೋಶನ್ ಕಲ್ಲಡ್ಕ, ಕೋಶಾಧಿಕಾರಿ ಬಾಲಕೃಷ್ಣ, ಛಾಯಕ್ಷೇಮಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ ಅನಂದ್.ಎನ್, ಉಪಾಧ್ಯಕ್ಷರುಗಳಾದ ರಾಜರತ್ನ, ಹರೀಶ್ ಕುಂದಾರ್, ವಲಯದ ಪದಾಧಿಕಾರಿಗಳು ವಲಯದ 30ಕ್ಕಿಂತಲೂ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು. ಕನ್ಯಾನ ಭಾರತ ಸೇವಾಶ್ರಮ ಸಂಚಾಲಕಾರದ ಶಂಕರ ಭಟ್ಟಾಚಾರ್ಯ ಸರಸ್ವತಿ ವಿದ್ಯಾಲಯದ ಸಂಚಾಲಕ ಈಶ್ವರ ಪ್ರಸಾದ್, ಶಾಲಾ ಮುಖ್ಯೋಪಾಧ್ಯಾಯ ಮಧುರ ಈಶ್ವರ ಪ್ರಸಾದ್, ಭ್ರಮರಿ ಚಾರಿಟೇಬಲ್ ಟ್ರಸ್ಟ್‍ನ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ದಯಾನಂದ್ ಬಂಟ್ವಾಳ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು