Recent Posts

Sunday, January 19, 2025
ಸುದ್ದಿ

ಕಲಾಸುರಭಿ ಯಕ್ಷಗಾನ ಬಳಗದ ಉದ್ಘಾಟನೆ ಮತ್ತು ಪ್ರಥಮ ಯಕ್ಷ ಪ್ರದರ್ಶನ- ಕಹಳೆ ನ್ಯೂಸ್

ಪುತ್ತೂರು:

ಕಲಾಸುರಭಿ ಯಕ್ಷಕಲಾ ಬಳಗ ಪುತ್ತೂರು ಇದರ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಯಕ್ಷ ಪ್ರದರ್ಶನವು ಆಗಸ್ಟ್ 23ನೇ ಶುಕ್ರವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಇಲ್ಲಿನ ಶಾಲಾ ಕ್ರೀಡಾಂಗಣದಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ನಡೆಯಲಿದೆ.
ಸಂಜೆ 4ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕಲಾಸುರಭಿ ಯಕ್ಷಗಾನ ಬಳಗದ ಗೌರವಾಧ್ಯಕ್ಷರಾದ ಶ್ರೀ ಶಂಕರ್ ಭಟ್ ಇವರು ಉದ್ಘಾಟಿಸಲಿದ್ದಾರೆ.
ರಾತ್ರಿ 8ರಿಂದ ‘ಶ್ರೀ ಕೃಷ್ಣ ಕಾರುಣ್ಯ’ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಕಥಾಭಾಗದಲ್ಲಿ ಭಾಗವತರಾಗಿ ಶ್ರೀ ಸತೀಶ್ ಇರ್ದೆ, ಚೆಂಡೆಯಲ್ಲಿ ಶ್ರೀ ರಾಜೇಂದ್ರ ಪ್ರಸಾದ್, ಮದ್ದಳೆಯಲ್ಲಿ ಶ್ರೀ ಮುರಳೀಧರ ಕಲ್ಲೂರಾಯ, ಚಕ್ರತಾಳದಲ್ಲಿ ಯತಿನ್ ಮತ್ತು ಆದಿತ್ಯ ಹಾಗೂ ಮುಮ್ಮೇಳದಲ್ಲಿ ಬಾಲಕೃಷ್ಣ ಪೂಜಾರಿ, ಚಂದ್ರಶೇಖರ ಸುಳ್ಯಪದವು, ರಾಜೇಶ್ ಕೆರೋಡಿಯನ್, ಉತ್ತಮ ಪಡ್ಪು, ಕೃಷ್ಣಪ್ರಸಾದ್ ಬೆಟ್ಟಂಪಾಡಿ, ಪ್ರವೀಣ್ ರಾಜ್, ಪ್ರದೀಪ್, ಪರೀಕ್ಷಿತ್, ಕಿರಣ್, ಕು.ಶ್ರೇಯಾ ಆಚಾರ್ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು