Recent Posts

Monday, January 20, 2025
ಸುದ್ದಿ

ಮಂಗಳೂರಿನಲ್ಲಿ ಕರ್ಕಶ ಹಾರ್ನ್ ವಿರುದ್ಧ ಪೊಲೀಸರ ಮಿಂಚಿನ ಕಾರ್ಯಾಚರಣೆ – ಕಹಳೆ ನ್ಯೂಸ್

ಮಂಗಳೂರು: ವಾಹನಗಳ ಕರ್ಕಶ ಹಾರ್ನ್ ವಿರುದ್ಧ ನಗರದ ಪಾಂಡೇಶ್ವರ ಸಂಚಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಸರಕಾರಿ ವಾಹನಗಳೂ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು ಈ ಪೈಕಿ ಸುಮಾರು 15 ವಾಹನಗಳಲ್ಲಿ ಅಳವಡಿಸಲಾಗಿದ್ದ ಕರ್ಕಶ ಹಾರ್ನ್‍ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಹರ್ಷ ಅವರು, ‘ಕರ್ಕಶ ಹಾರ್ನ್ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದ್ದು ಇನ್ನು ಮಂಗಳೂರು ಸ್ವಲ್ಪ ಮಟ್ಟಿಗೆ ಶಾಂತವಾಗಬಹುದು ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು