Saturday, November 23, 2024
ಸುದ್ದಿ

ಫೇಸ್ಬುಕ್, ವಾಟ್ಸ್ ಆಫ್ ಬಳಕೆಗೂ ಆಧಾರ್ – ಕಹಳೆ ನ್ಯೂಸ್

ನವದೆಹಲಿ: ಫೇಸ್‍ಬುಕ್, ವಾಟ್ಸ್ ಆಪ್‍ನಂಥ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ತಮ್ಮ ಖಾತೆಗಳೊಂದಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಕಡ್ಡಾಯ ಮಾಡುವ ಬಗ್ಗೆ, ಮದ್ರಾಸ್, ಬಾಂಬೆ ಹಾಗೂ ಮಧ್ಯಪ್ರದೇಶ ಹೈಕೋರ್ಟ್‍ಗಳಲ್ಲಿ ನಡೆಯುತ್ತಿರುವ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್‍ಗೆ ವರ್ಗಾಯಿಸಬೇಕು ಎಂದು ಫೇಸ್‍ಬುಕ್ ಸಂಸ್ಥೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಆಧಾರ್ ಸಂಖ್ಯೆ ಜೋಡಣೆ ರಾಷ್ಟ್ರದ ಹಿತದೃಷ್ಟಿಯಿಂದ ಅವಶ್ಯಕ. ‘ಬ್ಲೂ ವೇಲ್ ಗೇಮ್’ನಂಥ ಆನ್‍ಲೈನ್ ಅವಘಡ ತಪ್ಪಿಸಲು, ಸುಳ್ಳು ಸುದ್ದಿ, ಅನೈತಿಕ ವಿಚಾರಗಳನ್ನು ಹರಡುವ, ಅಪರಾಧ-ಹಿಂಸಾಚಾರಕ್ಕೆ ಪ್ರೇರೇಪಿಸುವವರನ್ನು ಪತ್ತೆ ಹಚ್ಚಲು ಇದರಿಂದ ಸಹಾಯವಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೇಸ್‍ಬುಕ್, ವಾಟ್ಸ್ ಆಪ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಕಪಿಲ್ ಸಿಬಲ್, ‘ಆಧಾರ್ ಕಡ್ಡಾಯದಿಂದ ಬಳಕೆದಾರರ ಗೌಪ್ಯತೆ ಹಕ್ಕು ಕಸಿದಂತಾಗುತ್ತದೆ. ಹಾಗಾಗಿ, ಕ್ರಿಮಿನಲ್ ತನಿಖೆಯ ವೇಳೆ ಮಾತ್ರ ಖಾತೆದಾರರ ವಿವರಗಳನ್ನು ಸಾಮಾಜಿಕ ಜಾಲತಾಣಗಳು ತನಿಖಾಧಿಕಾರಿಗಳಿಗೆ ನೀಡಿದರೆ ಸಾಕು ಎಂದು ನ್ಯಾಯಪೀಠ ಸೂಚಿಸಬೇಕು’ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾತ್ರವಲ್ಲದೆ ಗೂಗಲ್, ಟ್ವಿಟರ್, ಯು ಟ್ಯೂಬ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಅಭಿಪ್ರಾಯ ಸಂಗ್ರಹಿಸಲು ಆ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿತು. ಜೊತೆಗೆ, ಮದ್ರಾಸ್ ಹೈಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆ ಮುಂದುವರಿಯಬಹುದು. ಆದರೆ, ಅಂತಿಮ ತೀರ್ಪನ್ನು ಪ್ರಕಟಿಸುವಂತಿಲ್ಲ ಎಂದಿತು.