Recent Posts

Sunday, January 19, 2025
ಸುದ್ದಿ

ಸಂತ್ರಸ್ತರಿಗೆ ಶೀಘ್ರ ಪರಿಹಾರದ ಭರವಸೆ ; ಮಳೆಯಿಂದ ಹಾನಿಗೊಳಗಾದವರಿಗೆ ಬಜರಂಗದಳ ಸಾಥ್- ಕಹಳೆ ನ್ಯೂಸ್

ಪುತ್ತೂರು:
ನಿರಂತರ ಸುರಿದ ಮಳೆಗೆ ಕಡುಬಡತನದಲ್ಲಿ ವಾಸಿಸುತ್ತಿದ್ದ ಸಂಪ್ಯ ಉದಯಗಿರಿ ಐತ್ಯಿ ಎಂಬವರ ಮನೆ ಮಳೆಗೆ ಹಾನಿಗೀಡಾದ ವಿಷಯ ತಿಳಿದ ಪುತ್ತೂರಿನ ಬಜರಂಗದಳದ ಯುವ ಮುಂದಳು ಹರೀಶ್ ಕುಮಾರ್ ದೋಳ್ಪಾಡಿ ಸ್ಥಳಕ್ಕೆ ಧಾವಿಸಿ ಮನೆಯನ್ನು ಪರಿಶೀಲಿಸಿ ಅಲ್ಲಿಯ ನಗರಸಭೆ ಸದಸ್ಯರಾದ ಶೀನಪ್ಪ ನಾಯ್ಕರನ್ನ ಸ್ಥಳಕ್ಕೆ ಕರೆಸಿ ಮಳೆಗೆ ಹಾನಿಯಾದ ಮನೆಯನ್ನು ಅತೀ ಶೀಘ್ರದಲ್ಲಿ ಕೆಲಸ ಮಾಡಿಸಬೇಕಾಗಿ ದೋಳ್ಪಾಡಿಯವರ ಮಾನವಿ ಮೇರೆಗೆ ನಗರಸಭೆ ಸದಸ್ಯರಾದ ಶೀನಪ್ಪ ನಾಯ್ಕರು ಹಾನಿಗೀಡಾದ ಮನೆಯವರಿಗೆ ಅತೀ ಶೀಘ್ರದಲ್ಲಿ ಮನೆ ಕೆಲಸ ಮಾಡಿಕೋಡುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ,ಭಜರಂಗದಳದ ನಗರ ಗೋ ರಕ್ಷ ಪ್ರಮುಖರಾದ ದೇವರಾಜ ಸಿಂಹವನ,ಸಿಂಹವನ ಘಟಕದ  ಅಧ್ಯಕ್ಷ  ನವೀನ್ ಸಿಂಹವನ, ಬಜರಂಗದಳ ಕಾರ್ಯಕರ್ತರಾದ ರವಿ ಸಿಂಹವನ,ಮಣಿ ಸಿಂಹವನ,ಸಂತೋಷ್ ಪುತ್ತೂರು,ಕಮಲಾಕ್ಷ ಮತ್ತಿತರರು ಇದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು