Saturday, November 23, 2024
ಸುದ್ದಿ

ಶ್ರೀ ರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರ ತಂಡದಿಂದ ನೆರೆ ಸಂತ್ರಸ್ತ ಪ್ರದೇಶಗಳಿಗೆ ಮೇವು ಹಾಗೂ ಪಶು ಆಹಾರ ಸಂಗ್ರಹ ಮತ್ತು ವಿತರಣೆ – ಕಹಳೆ ನ್ಯೂಸ್

ಕಳೆದ ವಾರ ಸುರಿದ ಭಾರಿ ಮಳೆಗೆ ಕರ್ನಾಟಕ ಜನತೆ ತತ್ತರಿಸಿ ಹೋಗಿದ್ದಾರೆ. ಇವರ ಸಂಕಷ್ಟದಲ್ಲಿ ನಾನಾ ಕಡೆಯ ಕೊಡುಗೈ ದಾನಿಗಳು ಸಹಕಾರ ನೀಡಿದ್ದಾರೆ ನೀಡುತ್ತಿದ್ದಾರೆ. ಇಂಥ ವಿಚಾರ ಬಂದಾಗ ಶ್ರೀ ರಾಮಚಂದ್ರಾಪುರ ಮಠದ ಸ್ವಾಮಿಗಳು ಯಾವತ್ತು ಒಂದು ಕೈ ಮುಂದು. ನೆರೆಗೆ ಮನೆ ಮಠ ಕಳೆದುಕೊಂಡ ಅದೆಷ್ಟೋ ಸಂತ್ರಸ್ತರಿಗೆ ಸೂರು ಒದಗಿಸಿದ್ದಾರೆ. ಅದಲ್ಲದೆ ಗೋವುಗಳ ರಕ್ಷಣೆಯನ್ನಂತು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರವಾಹದಿಂದ ಮನೆ ಮಂದಿಯನ್ನು ಕಾಣದೆ ದಿಕ್ಕಾಪಾಲಾಗಿದ್ದ ಮೂಕ ಪ್ರಾಣಿಗಳ ರಕ್ಷಣೆಯಲ್ಲಿ ಭಾರತೀಯ ಗೋಪರಿವಾರ ತಂಡ ಮೊನ್ನೆಯಿಂದ ಮಾಡುತ್ತಿದೆ. ನೆರೆಗೆ ತುತ್ತಾದ ವಿವಿಧ ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತ ಪ್ರದೇಶಗಳಿಗೆ ಮೇವು ಹಾಗೂ ಪಶು ಆಹಾರ ಸಂಗ್ರಹ ಮತ್ತು ವಿತರಣೆಯನ್ನು ಸಂಘ ಮಾಡುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಾಮಿಗಳ ನೇತೃತ್ವದಲ್ಲಿ ತಂಡ ಕೆಲಸವನ್ನು ಮಾಡುತ್ತಿದೆ. ಶ್ರೀ ರಾಮಚಂದ್ರಾಪುರ ಮಠ ಭಾರತೀಯ ಗೋಪರಿವಾರ ತಂಡದಿಂದ ಆಗಸ್ಟ್ 10 ರಿಂದ ಆಗಸ್ಟ್ 21ರ ತನಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತ ಪ್ರದೇಶಗಳಿಗೆ ಮೇವು ಹಾಗೂ ಪಶು ಆಹಾರ ಸಂಗ್ರಹ ಮತ್ತು ವಿತರಣೆ ಮಾಡಿದ ವಿವರ ಇಂತಿದೆ.

1) ಚಿತ್ರದುರ್ಗ ಜಿಲ್ಲೆಯಿಂದ ದೀಪಕ್ ಕುಕ್ಕೆಮನೆ ಹಾಗು ಆರ್ ಕೆ ಭಟ್ ಬೆಳ್ಳಾರೆ ಇವರ ಜಂಟಿ ಪ್ರಾಯೋಜಕತ್ವದಲ್ಲಿ 1 ಲೋಡ್ ಒಣಹುಲ್ಲು ಮೇವು ಸಂಗ್ರಹಿಸಿ ಚಳ್ಳಕೆರೆಯ ಶ್ರೀ ಶಿವಸಾದ್ ಸ್ವಾಮೀಜಿಯವರ ಬಾಲಾಜಿ ಮಠ ಗೋಶಾಲೆಗೆ ವಿತರಣೆ ಮಾಡಲಾಗಿದೆ.
2) ದಾವಣಗೆರೆ ಜಿಲ್ಲೆಯಿಂದ ಹಾಲೇಶಪ್ಪ ಭೂವನಹಳ್ಳಿ ಮತ್ತು ಕುಟಂಬದವರ ಪ್ರಾಯೋಜಕತ್ವದಲ್ಲಿ 1 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ಜೈನ್ ಸಮಾಜ ಹಾವೇರಿ ಪ್ರಾಯೋಜಿತ ವಾಹನ ವ್ಯವಸ್ಥೆಯೊಂದಿಗೆ ಹಾನಗಲ್‍ನ ತಿಳುವಳ್ಳಿಯ ವಿಶ್ವಹಿಂದೂ ಪರಿಷತ್, ಭಜರಂಗ ದಳ ಸಂಚಾಲಿತ ಗೋಶಾಲೆಗೆ ವಿತರಣೆ ಮಾಡಲಾಗಿದೆ.
3) ದಾವಣಗೆರೆ ಜಿಲ್ಲೆಯಿಂದ ಹಾಲೇಶಪ್ಪ ಭೂವನಹಳ್ಳಿ ಮತ್ತು ಕುಟಂಬದವರ ಪ್ರಾಯೋಜಕತ್ವದಲ್ಲಿ 1 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ದೀಪಕ್ ಕುಕ್ಕೆಮನೆ ಪ್ರಾಯೋಜಿತ ವಾಹನ ವ್ಯವಸ್ಥೆಯೊಂದಿಗೆ ಬಾದಾಮಿಯ ಶಿವಯೋಗಿ ಮಂದಿರ ಗೋಶಾಲೆಗೆ ವಿತರಣೆ ಮಾಡಲಾಗಿದೆ.
4) ದಾವಣಗೆರೆ ಜಿಲ್ಲೆಯ ಕೊತ್ತನೂರು ಗ್ರಾಮಸ್ಥರಿಂದ ಪ್ರಾಯೋಜಿತ ಹಾಗು ನಿಸರ್ಗ ವೇದಿಕೆ ಖಿಒ 5 ದಾವಣಗೆರೆ ಸಹಕಾರದೊಂದಿಗೆ 2 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ಹಾವೇರಿಯ ಅನೇಕ ದಾನಿಗಳ ವಾಹನ ವ್ಯವಸ್ಥೆಯೊಂದಿಗೆ ಹಾವೇರಿಯ ಅನೇಕ ನೆರೆ ಸಂತ್ರಸ್ತ ರೈತರಿಗೇ ನೇರವಾಗಿ ವಿತರಣೆ ಮಾಡಲಾಗಿದೆ.
5) ದಾವಣಗೆರೆ ಜಿಲ್ಲೆಯ ನಿಸರ್ಗ ವೇದಿಕೆ ಖಿಒ 5 ದಾವಣಗೆರೆ ತಂಡ ಪ್ರಾಯೋಜಿತ 1ಟನ್ ಅಕ್ಕಿ ಸಂಗ್ರಹಿಸಿ ಹಾವೇರಿಯ ಅನೇಕ ದಾನಿಗಳ ಪ್ರಾಯೋಜಿತ ವಾಹನ ವ್ಯವಸ್ಥೆಯೊಂದಿಗೆ ಹಾವೇರಿಯ ಅನೇಕ ನೆರೆ ಸಂತ್ರಸ್ತ ಗೋಪಾಲಕರಿಗೇ ನೇರವಾಗಿ ವಿತರಣೆ ಮಾಡಲಾಗಿದೆ.
6) ದಾವಣಗೆರೆ ಜಿಲ್ಲೆಯ ಬನ್ನಿಕೋಡ್ ಗ್ರಾಮಸ್ಥರಿಂದ ಪ್ರಾಯೋಜಿತ ಹಾಗು ನಿಸರ್ಗ ವೇದಿಕೆ ಖಿಒ 5 ದಾವಣಗೆರೆ ಸಹಕಾರದೊಂದಿಗೆ 2 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ಚಳ್ಳಕೆರೆಯ ಶ್ರೀ ಶಿವಸಾದ್ ಸ್ವಾಮೀಜಿಯವರ ಬಾಲಾಜಿ ಮಠ ಗೋಶಾಲೆಗೆ ವಿತರಣೆ ಮಾಡಲಾಗಿದೆ.
7) ಮೈಸೂರಿನ ಕೆ ಆರ್ ನಗರದಿಂದ ದೇಸಿರಿ ಮಹೇಶಣ್ಣ ಮತ್ತು ಬಳಗ ಪ್ರಾಯೋಜಿತ 1 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ಕೊಡಗು ಸಿದ್ದಾಪುರದ ಬಾಳೆಲೆ ಎಂಬ ಊರಿನ ಅನೇಕ ನೆರೆ ಸಂತ್ರಸ್ತ ರೈತರಿಗೆ ನೇರವಾಗಿ ವಿತರಣೆ ಮಾಡಲಾಗಿದೆ.
8) ಮಂಡ್ಯ ಜಿಲ್ಲೆಯಿಂದ ಬೆಳ್ಳೂರ್ ಶಿವರಾಮಣ್ಣ, ಯಡಗನಹಳ್ಳಿ ದಯಾನಂದ್, ಅಂಬರಹಳ್ಳಿ ಕೃಷ್ಣೆ ಗೌಡ್ರು, ಮಂಡ್ಯ ಅನಂತ್ ರಾವ್ ಅಣ್ಣ ಹಾಗೂ ಮಂಡ್ಯ ಜಿಲ್ಲಾ ಹಲವು ರೈತ ಪ್ರಾಯೋಜಿತ 1 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಅನೇಕ ನೆರೆ ಸಂತ್ರಸ್ತ ರೈತರಿಗೇ ನೇರವಾಗಿ ವಿತರಣೆ ಮಾಡಲಾಗಿದೆ.
9) ಅರಸೀಕೆರೆ ಭಾರತೀಯ ಗೋಪರಿವಾರ ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ಪಾರಸ್ ಜೀ ಜೈನ್ ಹಾಗೂ ಸಿಂಧನೂರು ತಾಲೂಕಿನ ಗಾಂಧಿನಗರ (ಜಾಲಿಹಾಳ ಕ್ಯಾಂಪ್)ನ ರೈತರ ಸಹಕಾರದೊಂದಿಗೆ ಪಶುವೈದ್ಯಕೀಯ ಕಾಲೇಜು, ಬೆಂಗಳೂರಿನ 1982-87 ನೇ ಸಾಲಿನ ವಿದ್ಯಾರ್ಥಿಗಳ ಧನ ಸಹಾಯದಿಂದ 2 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ಗೋಶಾಲೆಗೆ ಹಾಗೂ ಬಾದಾಮಿಯ ಶಿವಯೋಗಿ ಮಂದಿರ ಗೋಶಾಲೆಗೆ ವಿತರಣೆ ಮಾಡಲಾಗಿದೆ.
10) ಮಂಡ್ಯ ಜಿಲ್ಲೆಯಿಂದ ಮಂಡ್ಯ ಅನಂತ್ ರಾವ್ ಅಣ್ಣ, ಬೆಳ್ಳೂರ್ ಶಿವರಾಮಣ್ಣ, ಯಡಗನಹಳ್ಳಿ ದಯಾನಂದ್, ಅಂಬರಹಳ್ಳಿ ಕೃಷ್ಣೆ ಗೌಡ್ರು , ಹಾಗೂ ಮಂಡ್ಯ ಜಿಲ್ಲಾ ಹಲವು ರೈತ ಪ್ರಾಯೋಜಿತ 3 ಲೋಡ್ ಒಣಹುಲ್ಲ ಮೇವು ಸಂಗ್ರಹಿಸಿ ಒಂದು ಲೋಡ್ ಕೊಡಗು ಸಿದ್ದಾಪುರ ಮತ್ತು ಬಾಳೆಲೆ ನೆರೆ ಸಂತ್ರಸ್ಥ ಪ್ರದೇಶದ ಗೋವುಗಳಿಗೆ ಹಾಗೂ ಒಂದು ಲೋಡ್ ಮೇವು ಸಂಪಾಜೆಯ ನೆರೆ ಸಂತ್ರಸ್ಥ ಪ್ರದೇಶದ ಗೋವುಗಳಿಗೆ ಹಾಗೂ ಇನ್ನುಳಿದ ಒಂದು ಲೋಡ್ ಮೇವು ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿಯಲ್ಲಿ ನೆರೆ ಸಂತ್ರಸ್ಥ ಪ್ರದೇಶದ ಗೋವುಗಳಿಗೆ ಅನೇಕ ನೆರೆ ಸಂತ್ರಸ್ತ ರೈತರಿಗೆ ನೇರವಾಗಿ ವಿತರಣೆ ಹಾಗೂ ಸಾಗಾಟಕ್ಕೆ ಬೇಕಾದ 3 ಲಾರಿ ವ್ಯವಸ್ಥೆಯನ್ನು ಶ್ರೀ ರಾಮಚಂದ್ರಾಪುರ ಮಠದ ಸಹಾಯ ನಿಧಿ ಪ್ರಾಯೋಜಕತ್ವದಲ್ಲಿ ಇಂದು ಬೆಳಗ್ಗೆಯಿಂದ ಆರಂಭ ಆಗಲಿವೆ
11) ಧಾರವಾಡ ಜಿಲ್ಲಾ ಗೋಪರಿವಾರದ ಸರ್ವ ಸದಸ್ಯರ ಮುಂದಾಳುತ್ವದಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಅಗತ್ಯ ವಸ್ತುಗಳ ಸಂಗ್ರಹ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಗೋಕರ್ಣ ಮುಂತಾದ ಭಾಗದ ನೆರೆಪೀಡಿತ ಕುಟುಂಬಗಳಿಗೆ ವಿತರಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು