ಯಲಹಂಕ: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ವತಿಯಿಂದ ನಡೆದ 28ನೇ ಅಖಿಲ ಭಾರತ ಬಿಲ್ಡರ್ಸ್ ಸಮ್ಮೇಳನವನ್ನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟಿಸಿದರು.
ಇಲ್ಲಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಸಾದಹಳ್ಳಿಯ ಕ್ಲಾರ್ಕ್ ಎಕ್ಸಾಟಿಕಾ ರೆಸಾರ್ಟ್‌ನಲ್ಲಿ ನಡೆದ ಸಮ್ಮೇಳನದಲ್ಲಿ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅವರು ಇದ್ದರು.
ದೇಶ ಕಟ್ಟುವಲ್ಲಿ ಬಿಲ್ಡರ್ಸ್‌ಗಳ ಪಾತ್ರ ಕೂಡ ಸಾಕಷ್ಟಿದೆ. ದೇಶದ ರಸ್ತೆಗಳ ನಿರ್ಮಾಣದಲ್ಲಿ ಬಿಲ್ಡರ್ಸ್‌ಗಳ ಪಾತ್ರ ಮುಖ್ಯವಾಗಿದೆ. ನೋಟ್ ಬ್ಯಾನ್‌ನಿಂದ ಮನೆಯಲ್ಲಿಟ್ಟಿದ್ದ ಕಪ್ಪು ಹಣ ಬ್ಯಾಂಕ್ ಸೇರಿದ್ದು, ಇನ್ನೊಂದು ವರ್ಷದಲ್ಲಿ ಜಿಎಸ್‌ಟಿಯಿಂದಾಗಿ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ಜಿಡಿಪಿ ದಿನದಿಂದ ದಿನಕ್ಕೆ ಏರುತ್ತಿದ್ದು, ವಿಶ್ವವೇ ಭಾರತವನ್ನು ತಿರುಗಿ ನೋಡುವಂತಾಗಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ವರದಿ : ಕಹಳೆ ನ್ಯೂಸ್