ಸುಬ್ರಹ್ಮಣ್ಯ : ಕುಕ್ಕೇ ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಕ್ಕೆ ವರ್ಷ ಕಳೆದಂತೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿಯಲ್ಲಿ ಬರುವ ಭಕ್ತರಿಗೆ ವಸತಿ ಗ್ರಹಗಳು ಹೆಚ್ಚುತ್ತಿದೆ. ರಕ್ಷಣೆ ದೃಷ್ಟಿಯಿಂದ ಮುಖ್ಯವಾಗಿ ಸುಬ್ರಹ್ಮಣ್ಯಕ್ಕೆ ಬೇಕಾದಂತಹದ್ದು, ಯಾರು ಭಕ್ತರು ಬರುತ್ತಾರೆ..? ಯಾವ ಊರು..? ಯಾವ ಉದ್ದೇಶಕ್ಕೆ ಬರುತ್ತಾರೆ ಎಂಬುದು ಮುಖ್ಯ.
ಮಂಗಳೂರು, ಬೆಳ್ತಂಗಡಿ, ಭಾಗದಲ್ಲಿ ಉಗ್ರರು ಭಯೋತ್ವಾದನೆ ಎಂಬ ವಿಚಾರ ಕೇಳಿಬರುತ್ತಿದೆ. ಆದ್ದರಿಂದ ಮಾನ್ಯ ಎಸ್.ಪಿ ಲಕ್ಷ್ಮೀಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕುಕ್ಕೇ ಸುಬ್ರಹ್ಮಣ್ಯ ಠಾಣೆಯ ಮಾನ್ಯ ಎ.ಎಸ್.ಐ ಚಂದಪ್ಪ ಗೌಡ ಅವರ ನೇತೃತ್ವದಲ್ಲಿ ಒಂದು ತಂಡ ರಚನೆಮಾಡಿ ಆಗೋಸ್ಟ್ 20 ರಿಂದ 23ರವರೆಗೆ ಕುಕ್ಕೇ ಸುಬ್ರಹ್ಮಣ್ಯದ ಎಲ್ಲಾ ವಸತಿಗ್ರಹಕ್ಕೆ ಭೇಟಿ ನೀಡಿ ಪರಿಶೀಲನೆ ಹಾಗೂ ಮಾಹಿತಿ ಕಾರ್ಯ ನಡೆಯುತ್ತಿದೆ.
ಕಡ್ಡಾಯವಾಗಿ ಎಲ್ಲಾ ವಸತಿಗ್ರಹಗಳಲ್ಲಿ ಸ್ಕ್ಯಾನಿಂಗ್ ಮೆಷಿನ್ ಅಥವಾ ಜೆರಾಕ್ಸ್ ಇರಬೇಕು, ಸಿ.ಸಿ.ಕ್ಯಾಮರಾ ಕಡ್ಡಾಯವಾಗಿ ವಸತಿಗ್ರಹಕ್ಕೆ ಪ್ರವೇಶ ಭಾಗ ಹಾಗೂ ಕಟ್ಟಡದ ಎಲ್ಲಾ ಹೊರಗಿನ ಭಾಗಗಳು ಕಾಣುವಂತೆ ಅಳವಡಿಸಬೇಕು.
ಯಾವುದೇ ಐ.ಡಿ ದಾಖಲೆ ಇಲ್ಲದ ಗ್ರಾಹಕರಿಗೆ ರೂಮ್ ನೀಡುವಂತಿಲ್ಲ. ರೂಮ್ ಪಡೆದುಕೊಳ್ಳುವ ಗ್ರಾಹಕರ ಪೂರ್ಣ ವಿಳಾಸ ಹಾಗು ಜೊತೆಗೆ ಬಂದವರು ಯಾವ ರೀತಿ ಸಂಬಂಧ ಹಾಗು ಅವರ ಪೂರ್ಣವಿಳಾಸ ನಮೂದಿಸಬೇಕು. ಜೊತೆಗೆ ಬಂದವರಲ್ಲಿ ಸಬಂಧಿಕರಲ್ಲದಿದ್ದಲ್ಲಿ ಡ್ರೈವರ್ ಹಾಗೂ ಇತರೆ ವ್ಯಕ್ತಿಗಳ ಪೂರ್ಣ ದಾಖಲೆ ಪತ್ರದ ಜೆರಾಕ್ಸ್ ಹಾಗು ಪೂರ್ಣ ವಿಳಾಸ ನಮೂದಿಸಬೇಕು.
ರೂಮ್ ಬುಕ್ಕ್ ಮಾಡಿ ಮೊದಲಿಗೆ ಎರಡು ಜನ ಬಂದು ಉಳಿದವರು ಮತ್ತೆ ಬರುತ್ತಾರೆ ಎಂಬ ಸಂದರ್ಭದಲ್ಲಿ ಮತ್ತೆ ಬಂದವರ ಹೆಸರು ವಿಳಾಸ ಪಡೆದು ತನಿಖೆ ಮಾಡಿ ರೂಮ್ ನೀಡಬೇಕು.
ದಾಖಲೆ ಪತ್ರ ಪಡೆದುಕೊಂಡು ಮೊಬೈಲ್ ಅಲ್ಲಿ ಚಿತ್ರೀಕರಿಸಿಕೊಳ್ಳಬಾರದು ಜೆರಾಕ್ಸ್ ಅಥವಾ ಸ್ಕ್ಯಾನ್ ಮಾಡಿ ಪ್ರತ್ಯೇಕ ಫೈಲ್ ಮಾಡಿಕೊಳ್ಳಬೇಕು. ವಸತಿಗ್ರಹಗಳಲ್ಲಿ ಕರ್ತವ್ಯ ಮಾಡುವ ಎಲ್ಲಾ ಉದ್ಯೋಗಿಗಳ ವಿಳಾಸ ಹಾಗು ದಾಖಲೆ ಇಟ್ಟುಕೊಳ್ಳಬೇಕು.
ವಸತಿಗ್ರಹದ ರಕ್ಷಣಾ ಸಿಬಂದಿಗಳ ಪೂರ್ಣ ವಿಳಾಸ ಐ.ಡಿ ದಾಖಲೆ ಹಾಗು ಒಂದು ಫೋಟೋ ಪೊಲೀಸ್ ಠಾಣೆಗೆ ನೀಡಬೇಕು. ಮೇಲಾಧಿಕಾರಿಗಳಿಂದ ಬಂದ ಮಾಹಿತಿ ಪ್ರಕಾರ ರಕ್ಷಣೆಗೋಸ್ಕರ ಕುಕ್ಕೇ ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಎಲ್ಲಾ ವಸತಿಗ್ರಹಗಳ ತನಿಖೆ ಕೈಗೆತ್ತಿಕೊಂಡಿದ್ದಾರೆ.