Sunday, November 24, 2024
ಸುದ್ದಿ

ಐಎನ್‍ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ಬಂಧನ – ಕಹಳೆ ನ್ಯೂಸ್

ನವದೆಹಲಿ: ಸರಿ ಸುಮಾರು 27 ಗಂಟೆಗಳ ಕಾಲ ಯಾರ ಕಣ್ಣಿಗೂ ಬೀಳದೇ ನಾಪತ್ತೆಯಾಗಿದ್ದ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಬಂಧಿಸುವಲ್ಲಿ ಕೊನೆಗೂ ಸಿಬಿಐ ಯಶಸ್ವಿಯಾಗಿದೆ. ಬುಧವಾರ ಸಂಜೆ ಎಐಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿಢೀರ್ ಹಾಜರಾಗಿದ್ದ ಚಿದಂಬರಂ, ನಾನೆಲ್ಲೂ ತಪ್ಪಿಸಿಕೊಂಡು ಹೋಗಿರಲಿಲ್ಲ ಎಂದರು.

ಇಡೀ ದಿನ ನಡೆದ ಹೈಡ್ರಾಮಾಗಳ ಬಳಿಕ ಸಿಬಿಐ ತಂಡವು ಬುಧವಾರ ರಾತ್ರಿ ಸ್ವತಃ ಚಿದಂಬರಂ ಅವರ ಮನೆಯ ಗೋಡೆ ಹತ್ತಿ, ಒಳಕ್ಕೆ ನುಗ್ಗಿ ಅವರನ್ನು ಬಂಧಿಸಿದೆ. ಐಎನ್‍ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿದ ಸಿಬಿಐ ತಂಡ, ತಮ್ಮ ಕಾರಿನಲ್ಲಿ ಜೋರ್ ಬಾಘ್ ನಿವಾಸದಿಂದ ನೇರವಾಗಿ ಸಿಬಿಐ ಪ್ರಧಾನ ಕಚೇರಿಗೆ ಕರೆದೊಯ್ದು ವಿಚಾರಣೆ ಶುರು ಮಾಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದ ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಚಿದಂಬರಂ, ತಮ್ಮ ಅರ್ಜಿಯ ತ್ವರಿತ ವಿಚಾರಣೆ ಕೋರಿದ್ದರಾದರೂ, ಅಲ್ಲೂ ಅವರಿಗೆ ರಿಲೀಫ್ ಸಿಗಲಿಲ್ಲ. ಹೀಗಾಗಿ, ಮಂಗಳವಾರ ಸಂಜೆಯಿಂದಲೇ ತಲೆಮರೆಸಿಕೊಂಡಿದ್ದರು. ಬುಧವಾರ ಇಡೀ ದಿನ ಸುಪ್ರೀಂ ಕೋರ್ಟ್‍ಗೆ ಅಲೆದಾಡಿದ ಚಿದಂಬರಂ, ಪರ ವಕೀಲರ ತಂಡವು, ತಮ್ಮ ಪ್ರಯತ್ನದಲ್ಲಿ ಸೋಲು ಕಂಡಿತು. ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದ ಕಾರಣ, ಬಂಧನದಿಂದ ರಕ್ಷಣೆ ಸಿಗಬಹುದೆಂಬ ಚಿದು ನಿರೀಕ್ಷೆ ಹುಸಿಯಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು