Recent Posts

Monday, January 20, 2025
ಸುದ್ದಿ

ಮಕ್ಕಳು ಶಾಲೆಗೆ ಹೋಗುತ್ತಿಲ್ಲವೆ? ಪೊಲೀಸರು ಮನೆಗೆ ಬರ್ತಾರೆ ಹುಷಾರ್! • ಕಹಳೆ ನ್ಯೂಸ್

 

ಬೆಂಗಳೂರು : ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸುವ ಮೊದಲೇ ವಿದ್ಯಾರ್ಥಿಗಳು ಶಾಲೆ ಬಿಟ್ಟರೆ ಶಿಕ್ಷಕರು ಪೋಷಕರ ಮನವೊಲಿಸಲು ಹೋಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಶಾಲೆಗೆ ಹೋಗಲ್ಲ ಎಂದು ಪಟ್ಟು ಹಿಡಿಯುವ ವಿದ್ಯಾರ್ಥಿಗಳ ಮನವೊಲಿಸಲು, ಪೊಲೀಸರಿಗೆ ಹೇಳ್ತಿನಿ ಅನ್ನುವುದು ಹಳೆಯ ವಿಚಾರವಾಗಲಿದೆ. ಯಾಕಂದ್ರೆ ಇನ್ನು ಮುಂದೆ ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿಕೊಂಡು ಶಿಕ್ಷಕರು ಬರುವುದಿಲ್ಲ, ಬದಲಾಗಿ ಪೊಲೀಸರೇ ಬರಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದಲ್ಲಿ ಎಲ್ಲಿಯೂ ಜಾರಿಯಲ್ಲಿ ಇಲ್ಲದ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಉತ್ತರ ವಲಯದ ಪೊಲೀಸರು ಮುಂದಾಗಿದ್ದಾರೆ. “ಮರಳಿ ಬಾ ಶಾಲೆಗೆ” ಅನ್ನುವ ಘೋಷಣೆಯನ್ನು ಪೊಲೀಸರು ಮೊಳಗಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹುದೊಂದು ವಿಶಿಷ್ಟ ಯೋಜನೆಯ ಹಿಂದಿರುವುದು ಖಡಕ್ಕ್ ಪೊಲೀಸ್ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್. ವಿಜಯಪುರ ಜಿಲ್ಲೆಯ ಭೀಮಾತೀರ, ಇಂಡಿ, ಚಡಚಣ ಮತ್ತು ಬೆಳಗಾವಿ ಜಿಲ್ಲೆಯ ರಾಯಭಾಗ, ಅಥಣಿ ಹೀಗೆ ಅನೇಕ ಭಾಗಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಗ್ಗಿಸುವುದು ಹೇಗೆ ಎಂದು ಯೋಚಿಸಿದಾಗ ಹೊಳೆದದ್ದು ಈ ಐಡಿಯಾ. ಅನಕ್ಷರತೆಯೇ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಮನಗಂಡಿರುವ ಪೊಲೀಸರು “ಅಕ್ಷರಕ್ಕಾಗಿ ಆರಕ್ಷಕ” ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದಾರೆ.

ಈ ಯೋಜನೆ ಪ್ರಕಾರ ಶಾಲೆ ಪ್ರಾರಂಭವಾಗಲು ಇನ್ನೇನು ಕೆಲವು ದಿನ ಇದೆ ಅಂದಾಗ ಪೇದೆ ಹಾಗೂ ಮುಖ್ಯ ಪೇದೆಗಳು ಶಾಲೆ ಬಿಟ್ಟಿರುವ ಮಕ್ಕಳ ಮಾಹಿತಿ ಸಂಗ್ರಹಿಸುತ್ತಾರೆ.ಬಳಿಕ ಸಂಬಂಧ ಪಟ್ಟ ಶಿಕ್ಷಕರೊಂದಿಗೆ ಸೇರಿ, ಶಾಲೆ ಬಿಟ್ಟ ಮಕ್ಕಳ ಮನೆಗೆ ಹೋಗಿ ಪೋಷಕರ ಮನವೊಲಿಸಿ ಶಾಲೆಗೆ ಹೋಗು ಜಾಣ ಅನ್ನುತ್ತಾರೆ.

ಶಾಲೆ ಬಿಟ್ಟ ಮಕ್ಕಳು ನಿಧಾನವಾಗಿ ದುಶ್ಚಟಗಳಿಗೆ ಬಲಿಯಾಗುತ್ತಾರೆ. ಬಳಿಕ ಸಮಾಜ ದ್ರೋಹಿಗಳ ತೆಕ್ಕೆ ಸೇರಿಕೊಳ್ಳುತ್ತಾರೆ, ಇದನ್ನು ತಪ್ಪಿಸವ ಸಲುವಾಗಿ ಇಂತಹುದೊಂದು ಯೋಜನೆ ಇದೀಗ ಜಾರಿಗೆ ಬರುತ್ತಿದೆ.

ವರದಿ : ಕಹಳೆ ನ್ಯೂಸ್

Leave a Response