Monday, November 25, 2024
ಸುದ್ದಿ

ಅಮೃತಾಳ ಶಸ್ತ್ರಚಿಕಿತ್ಸೆಗೆ ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯಿಂದ ಆಸರೆ – ಕಹಳೆ ನ್ಯೂಸ್

ಎಲ್ಲರಂತೆ ಆಟವಾಡಿ ಬೆಳೆಯಬೇಕಾಗಿದ್ದ ಅಮೃತಾಳ ಬಾಳಿಗೆ ಬಲ ಥೋರಾಸಿಕ್ ಸ್ಕೋಲಿಯೋಸಿಸ್ ಭಾದಿಸಿ ಕೆಲ ಸಮಯದಿಂದ ಸಂಕಟಪಡುತ್ತಿದ್ದಾಳೆ. ಈಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯ ವಿಧ್ಯಾರ್ಥಿ.
ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿಯವರ ಪುತ್ರಿ ಅಮೃತಾ 6 ತಿಂಗಳಿನಿಂದ ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಸಂಪೂರ್ಣ ಬಾಗಿದೆ. ಎಲ್ಲ ಮಕ್ಕಳಂತೆ ಬೆಳೆಯಬೇಕಾಗಿದ್ದ ಅಮೃತಾಳ ಬಾಳಿನಲ್ಲಿ ಕತ್ತಲು ಆವರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ .ಇದನ್ನು ಪರೀಕ್ಷಿಸಿದ ಮಂಗಳೂರಿನ ಯನಪೋಯ ಆಸ್ಪತ್ರೆಯ ವೈದ್ಯರು ಸರಿಪಡಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಖರ್ಚು ತಗಲಬಹುದು ಎಂದು ವೈದ್ಯರು ತಿಳಿಸಿರುತ್ತಾರೆ. ಅದರೆ ತೀರ ಬಡತನದಲ್ಲಿರುವ ಇವರ ಪೋಷಕರಿಗೆ ಚಿಕಿತ್ಸೆಯ ವೆಚ್ಚ ಭರಿಸುವುದು ಅಸಾಧ್ಯ  ಮಾತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯು ಅಮೃತಾಳಿಗೆ 10,000 ಸಂಗ್ರಹಿಸಿ ಚೆಕ್ ಮೂಲಕ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಮಂಗಳೂರು ಘಟಕದ ಅಧ್ಯಕ್ಷೆ ವೀಣಾಲತಾ, ಕಡಬ ಘಟಕದ ಅಧ್ಯಕ್ಷ ಕುಶಾಲಪ್ಪ ನಾಯ್ಕ, ಮಂಗಳೂರು ಸಂಘಟನಾ ಕಾರ್ಯದರ್ಶಿ ಮಂಜುನಾಥ್, ನಾರಾಯಣ, ಚಿತ್ರಲತಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಬೇಗ ಗುಣಮುಖ ಆಗಲೆಂದು ಅಮೃತಾಳಿಗೆ ಹರಸಿದರು.