ರಾಜ್ಯ ಬಿಜೆಪಿಯ ನೂತನ ರಾಜ್ಯಧ್ಯಕ್ಷರಾಗಿ ನಳೀನಕುಮಾರ ಕಟೀಲು ನೇಮಕಗೊಂಡಿದ್ದಕ್ಕೆ ಕಾರವಾರ-ಅಂಕೊಲಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ. ನಳೀನ ಕುಮಾರ ಕಟೀಲು ಅವರು ಒಬ್ಬ ಶ್ರೇಷ್ಠವಾಗಿ ಹಾಗೂ ಜನಪರ ಸಂಸದರಾಗಿದ್ದು ಸಂಸತ್ತಿನಲ್ಲಿ ಹಲವು ಬಾರಿ ಕರ್ನಾಟಕದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.
ಹಿಂದೆ ಗೋವಾ ಸರ್ಕಾರ ಕರ್ನಾಟಕದಿಂದ ಬರುವ ಮೀನುಗಳಿಗೆ ಫಾರ್ಮಾಲಿನ್ ದ್ರಾವಣವನ್ನು ಹಾಕಲಾಗುತ್ತದೆ ಎಂಬ ವದಂತಿ ಕಾರಣಕ್ಕೆ ಕರ್ನಾಟಕದಿಂದ ಗೋವಾಕ್ಕೆ ಮೀನಿನ ಸಾಗಣೆಯನ್ನು ನೀಷೇಧಿಸಿಲಾಗಿತ್ತು. ಆಗ ನಿಯೋಗದಲ್ಲಿ ನಳೀನ ಕುಮಾರ ಕಟೀಲು ಅವರು ತನ್ನೊಂದಿಗೆ ಗೋವಾಕ್ಕೆ ತೆರಳಿ ಅಲ್ಲಿನ ಆರೋಗ್ಯ ಮಂತ್ರಿ ವಿಶ್ವಜೀತ್ ರಾಣೆಯವರ ಮನವೊಲಿಸುವಲ್ಲಿ ಸಫಲರಾಗಿದ್ದರು ನಳೀನಕುಮಾರ ರಾಜ್ಯಧ್ಯಕ್ಷರಾಗಿರುವುದು ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ತುಂಬಲು ಸಾಧ್ಯವಾಗಲಿದೆ ಎಂದು ಕಾರವಾರ ಶಾಸಕಿ ರೂಪಾಲಿ ಎಸ್ ನಾಯ್ಕ ತಿಳಿಸಿದ್ದಾರೆ.