ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾಲಕೋಡ್ ಗ್ರಾಮ ಪಂಚಾಯತ್ ಹಳೆಮನೆ ವಾರ್ಡಿನ ಕೆರೆಕೋಣ್ ಯಿಂದ ಹೆಬ್ಬಾನಕಾನ್ ಮಾರ್ಗವಾಗಿ ಮೇಲಿನ ಕೇರಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಸೇತುವೆಯು ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಿದ್ದು, ಈಗ ಶಿಥಿಲಾವಸ್ಥೆಯ ಹಂತ ತಲುಪಿದೆ.
ಅಲ್ಲದೆ ಇಲ್ಲಿನ ಡಾಂಬರ್ ರಸ್ತೆ ಪೂರ್ತಿಯಾಗಿ ಕಿತ್ತುಹೋಗಿದೆ ಹಾಗೂ ಮೇಲಿನಕೇರಿ ಹತ್ತಿರದ ಮಣ್ಣಿನ ರಸ್ತೆ ಕೆಟ್ಟು ಹೋಗಿದ್ದು ದಿನ ನಿತ್ಯ ಓಡಾಡುವ ದ್ವಿಚಕ್ರ ವಾಹನ ಸವಾರರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಪಾದಚಾರಿಗಳು ಓಡಾಡಲು ಬಹಳ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯನ್ನು 90ಕ್ಕೂ ಹೆಚ್ಚು ಕುಟುಂಬಗಳ 350 ಹೆಚ್ಚು ಜನರು ಅವಲಂಬಿಸಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ ನೂತನ ಸೇತುವೆ ನಿರ್ಮಿಸಿ ರಸ್ಥೆಯನ್ನು ಮುಂದಿನ ದಿನಗಳಲ್ಲಿ ಡಾಂಬರೀಕರಣ ಮಾಡಿ ಜನರಿಗೆ ಸುಗಮವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕಾಗಿ ಸಂಬಂಧಪಟ್ಟ ಊರನಾಗರಿಕರ ವಿನಂತಿಯಾಗಿದೆ. ಮಾನ್ಯ ಕುಮಟಾ-ಹೊನ್ನಾವರ ವಿಧಾನಸಭಾ ಶಾಸಕರಾದ ದಿನಕರ ಶೆಟ್ಟಿಯವರು ಗಮನ ಹರಿಸಿ ಇದಕ್ಕೊಂದು ತಕ್ಷಣ ಪರಿಹಾರ ಒದಗಿಸಿ ಕೊಡಬೇಕಾಗಿದೆ.