Recent Posts

Tuesday, November 26, 2024
ಸುದ್ದಿ

ಫಿಲೋಮಿನಾ ಕಾಲೇಜಿನಲ್ಲಿ ಡಾ| ಶಿಶಿಲರ ಪಠ್ಯಪುಸ್ತಕಗಳ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಸಾಧಕರ ಸಾಧನೆಗಳನ್ನು ಅರ್ಥೈಸುವುದಕ್ಕಿಂತಲೂ ಅವರು ಕಂಡುಕೊಂಡ ವಿವಿಧ ಮಾರ್ಗೋಪಾಯಗಳನ್ನು ತಿಳಿದುಕೊಳ್ಳುವುದ ಬಹಳ ಮುಖ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ ಆಗಸ್ಟ್ 22 ರಂದು ಸ್ಪಂದನ ಸಭಾಭವನದಲ್ಲಿ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ| ಪ್ರಭಾಕರ ಶಿಶಿಲ ಬರೆದಿರುವ ಮಂಗಳೂರು ವಿವಿಯ ನೂತನ ಸಿಬಿಸಿಎಸ್ ಪಠ್ಯಕ್ರಮಾಧರಿತ ಬಿಎಯ ಪ್ರಥಮ ಸೆಮಿಸ್ಟರ್ ಅರ್ಥಶಾಸ್ತ್ರ ವಿಷಯದ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಎರಡು ಪಠ್ಯ ಪುಸ್ತಕಗಳನ್ನು ಬಿಡುಗಡೆಗೊಳಿಸಿ, ಮಾತನಾಡಿದರು. ಸಾಧನೆಗಳು ಕ್ಷಣ ಮಾತ್ರದಲ್ಲಿ ಲಭಿಸುವುದಿಲ್ಲ. ಅದರ ಹಿಂದೆ ಬಹಳಷ್ಟು ಶ್ರಮ, ಸಾಮರ್ಥ್ಯ ಅಡಗಿದೆ. ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಹವ್ಯಾಸಗಳನ್ನು ಅಳವಡಿಸಿಕೊಂಡಾಗ ಶಿಕ್ಷಣದ ಮೂಲ ಉದ್ದೇಶ ಈಡೇರಿದಂತಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ| ಬಿ. ಪ್ರಭಾಕರ ಶಿಶಿಲ ಮಾತನಾಡಿ, ನಾವು ಕಲಿಯುವ ಅರ್ಥಶಾಸ್ತ್ರ ಆಡಂ ಸ್ಮಿತ್ತರದ್ದು. ಫಿಲಾಸಫಿ ಮತ್ತು ಲಾಜಿಕ್ ಇಲ್ಲದ ಅರ್ಥಶಾಸ್ತ್ರ ಪ್ರಯೋಜನವಿಲ್ಲ. ನಮ್ಮಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಸಾಧನೆ ಮಾಡಬೇಕೆಂಬ ಛಲವಿರಬೇಕು. ಪ್ರತಿಭೆ ಪ್ರತಿಯೊಬ್ಬರಲ್ಲೂ ಇದೆ. ಅದಕ್ಕೆ ಒಂದು ಚಾನೆಲ್ ಸಿಕ್ಕಿದಾಗ ಮೌಲ್ಯ ಸಿಕ್ಕಿದಂತಾಗುತ್ತದೆ. ಪುಸ್ತಕಗಳನ್ನು ಕೊಂಡು ಓದುವ ಮನೋಗುಣವಿದ್ದಾಗ ಬರಹಗಾರರಿಗೆ ಹೆಚ್ಚಿನ ಸ್ಪೂರ್ತಿ ಲಭ್ಯವಾಗುತ್ತದೆ ಎಂದರು.

ಸಭಾಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಬರವಣಿಗೆ ಅನ್ನುವುದು ಒಂದು ದೊಡ್ಡ ಸೇವೆ. ಅದು ಯುವ ಮನಸ್ಸುಗಳಿಗೆ ಸ್ಪೂರ್ತಿಯನ್ನು ನೀಡಬಲ್ಲುದು. ಜೀವನದಲ್ಲಿ ಸಾಧಿಸಬೇಕೆಂಬ ಕನಸು ನಮ್ಮಲ್ಲಿರಬೇಕು. ದೂರದೃಷ್ಟಿಯುಳ್ಳ ಆಡಳಿತ ವ್ಯವಸ್ಥೆ, ಬದ್ಧತೆಯುಳ್ಳ ಶಿಕ್ಷಕರು ಮತ್ತು ಸೃಜನಶೀಲ ವಿದ್ಯಾರ್ಥಿಗಳಿದ್ದಾಗ ಶೈಕ್ಷಣಿಕ ಸಾಧನೆ ಸುಲಭ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ| ಎ. ಪಿ. ರಾಧಾಕೃಷ್ಣ ಉಪಸ್ಥಿತರಿದ್ದರು.
ರೂಪ ಮತ್ತು ತಂಡದವರು ಪ್ರಾರ್ಥಿಸಿದರು. ಅರ್ಥಶಾಸ್ತ್ರ ವಿಬಾಗ ಮುಖ್ಯಸ್ಥ ಪ್ರೊ. ದಿನಕರ ರಾವ್ ಸ್ವಾಗತಿಸಿದರು. ವಿದ್ಯಾರ್ಥಿನಿ ಚೇತನಾ ವಂದಿಸಿ, ಸಿ| ಅನ್ನಮ್ಮ ನಿರೂಪಿಸಿದರು.