ಕರ್ನಾಟಕದಾದ್ಯಂತ ಭೀಕರ ಅತಿವೃಷ್ಟಿಯಿಂದಾಗಿ ಸಂಭವಿಸಿದ ಹಾನಿಯಿಂದ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಹಾಗೂ ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯಿಂದ ರೂ.10 ಲಕ್ಷದ ಚೆಕ್ಕನ್ನು ಪೂಜ್ಯ ಒಡಿಯೂರು ಶ್ರೀಗಳು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಒಡಿಯೂರು ಶ್ರೀ ವಿ.ಸ.ಸೌ. ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ, ನಿರ್ದೇಶಕ ಪಿ.ಲಿಂಗಪ್ಪ ಗೌಡ, ವೇಣುಗೋಪಾಲ ಮಾರ್ಲ, ದೇವಪ್ಪ ನೋಂಡ, ತಾರಾನಾಥ ಶೆಟ್ಟಿ ಒಡಿಯೂರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಗ್ಗಪ್ಪ ಶೆಟ್ಟಿ ಕೊಂಬಿಲ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಹಿರಿಯ ಪತ್ರಕರ್ತ ಯಶವಂತ ವಿಟ್ಲ, ಬಿ.ಜೆ.ಪಿ. ದ.ಕ. ಜಿಲ್ಲಾ ಕಾರ್ಯದರ್ಶಿ ಶ್ರೀ ರಾಮದಾಸ್ ಶೆಟ್ಟಿ, ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ರಮಾನಾಥ ರೈ, ಬಿ.ಜೆ.ಪಿ. ಕನ್ಯಾನ ಮತ್ತು ಕರೋಪಾಡಿ ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂಬೈಯ ಗುರುಭಕ್ತರು, ಒಡಿಯೂರು ಸಹಕಾರಿಯ ಹಾಗೂ ಶ್ರೀ ಸಂಸ್ಥಾನದ ಸಿಬ್ಬಂದಿ ವರ್ಗದವರು ಪರಿಹಾರ ನಿಧಿಗೆ ಸಹಕರಿಸಿದ್ದರು.