Monday, November 25, 2024
ಸುದ್ದಿ

ಸಂತ ಫಿಲೋಮಿನಾ ರಸ್ತೆ ವಿಭಾಜಕದಲ್ಲಿ ಹಸಿರ ನಡುವ ದಾರಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮತ್ತು ಪುತ್ತೂರು ನಗರ ಸಭೆಯ ಸಹಯೋಗದಲ್ಲಿ ಹಸಿರ ನಡುವ ದಾರಿ ಯೋಜನೆಯ ಮೂಲಕ ಕಾಲೇಜು ಕ್ಯಾಂಪಸ್ ಒಳಗಿನ ಸುಮಾರು 250 ಮೀಟರ್ ಉದ್ದದ ದ್ವಿಮುಖ ರಸ್ತೆ ವಿಭಾಜಕ ಮತ್ತು ದರ್ಬೆ ಸರ್ಕಲ್‍ನಿಂದ ಪತ್ರಾವೊ ಸರ್ಕಲ್ ತನಕದ ಸುಮಾರು 450 ಮೀಟರ್ ಉದ್ದದ ದ್ವಿಮುಖ ರಸ್ತೆ ವಿಭಾಜಕಗಳಲ್ಲಿ ಸಣ್ಣ ಜಾತಿಯ ಸುಮಾರು 650 ಕಣಗಿಲೆ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ನಗರಸಭಾ ಆಯುಕ್ತೆ ರೂಪಾ ಟಿ ಶೆಟ್ಟಿ ಈ ಯೋಜನೆಗೆ ಶುಭ ಹಾರೈಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ರೈ ಇವರ ನೇತೃತ್ವದಲ್ಲಿ ಮಂಗಳೂರಿನ ಸಸ್ಯೋದ್ಯಾನದಿಂದ ತರಿಸಲಾದ ಗಿಡಗಳಿಗೆ ಕಾಲೇಜಿನ ಸಸ್ಯೋದ್ಯಾನದಲ್ಲಿ ಬೇರು ಬರಿಸುವ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಪುತ್ತೂರು ನಗರ ಸಭೆಯು ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಶಿಪ್ರಭಾ ಬಿ, ಸ್ಮಿತಾ ವಿವೇಕ್, ನಗರ ಸಭೆಯ ಪರಿಸರ ಅಭಿಯಂತರರಾದ ಗುರುಪ್ರಸಾದ್ ಶೆಟ್ಟಿ ಮತ್ತು ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಸಹಕರಿಸಿದರು.