ಉಪ್ಪಿನಂಗಡಿ: ಮಹೂರ್ಂ ನಿಝಾಮುದ್ದೀನ್ ಕೆಂಪಿ ಇವರ ಸ್ಮರಣಾರ್ಥವಾಗಿ ಬ್ಲಡ್ ಡೊನರ್ಸ್ ಮಂಗಳೂರು (ರಿ) ಇದರ 200ನೇ ರಕ್ತದಾನ ಶಿಬಿರವು ಆಗಸ್ಟ್ 25ನೇ ಆದಿತ್ಯವಾರದಂದು ಎ ಜೆ ಆಸ್ಪತ್ರೆ ಮಂಗಳೂರು ಸಹಭಾಗಿತ್ವದೊಂದಿಗೆ ಉಪ್ಪಿನಂಗಡಿ ಪೃಥ್ವಿ ಶಾಪಿಂಗ್ ಮಹಲ್ ಎದುರುಗಡೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲೀಕುದ್ದೀನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧ್ಯಕ್ಷ ಅಲ್ಹಾಜ್ ಮುಸ್ತಫಾ ಕೆಂಪಿ ವಹಿಸಲಿದ್ದಾರೆ.
ರಕ್ತದಾನ ಶಿಬಿರದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಅವರು ಮಾಡಲಿದ್ದಾರೆ.
ಕಾರ್ಯಕ್ರಮದ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ರೈ ಚಾರಿಟೇಬಲ್ ಟ್ರಸ್ಟ್(ರಿ) ಮುಖ್ಯಸ್ಥರಾದ ಅಶೋಕ್ ರೈ ಕೋಡಿಂಬಾಡಿ, ದೀನರ ಕನ್ಯಾ ಮಾತೆಯ ಧರ್ಮಗುರುಗಳಾದ ರೆವರೆಂಡ್ ಅಬೆಲ್ ಲೋಬೋ, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷರಾದ ಮಸ್ವುದ್ ಸಅದಿ ಹಾಗೂ ಇನ್ನಿತರ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು ್ಲ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿರುತ್ತಾರೆ.