Monday, November 25, 2024
ಸುದ್ದಿ

ಪುತ್ತೂರಿನಲ್ಲಿ ಅಡ್ವಾನ್ಸಸ್ ಇನ್ ಸೈನ್ಸ್, ಇಂಜಿನಿಯರಿಂಗ್ ಎಂಡ್ ಮ್ಯಾನೇಜ್‍ಮೆಂಟ್ ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು: ಸುದೀರ್ಘಕಾಲ ನಿರಂತರವಾಗಿ ಶ್ರಮಪೂರ್ವಕ ಪ್ರಯತ್ನವನ್ನು ಮುಂದುವರಿಸಿದರೆ ಜೀವನದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಬಹುದು ಎಂದು ಮಣಿಪಾಲ್ ಡಾಟ್ ನೆಟ್ ಸಂಸ್ಥೆಯ ಸಂಶೋಧನಾ ನಿರ್ದೇಶಕ ಡಾ.ಯು.ಸಿ.ನಿರಂಜನ್ ಹೇಳಿದರು. ಅವರು ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ನವದೆಹಲಿ ಹಾಗೂ ಐಇಇಇ ವಿದ್ಯಾರ್ಥಿ ವಿಭಾಗ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಅಡ್ವಾನ್ಸಸ್ ಇನ್ ಸೈನ್ಸ್, ಇಂಜಿನಿಯರಿಂಗ್ ಎಂಡ್ ಮ್ಯಾನೇಜ್‍ಮೆಂಟ್ ಎನ್ನುವ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ (NCASEM-2019) ಚಾಲನೆ ನೀಡಿ ಮಾತಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಯಮವನ್ನು ಪ್ರಾರಂಭಿಸಿ ನಡೆಸುವುದು ಒಂದು ಸವಾಲಿನ ಕೆಲಸವಾದರು ಅದರಲ್ಲಿ ಸಿಗುವಂತಹ ಆತ್ಮತೃಪ್ತಿ ಅನನ್ಯವಾದದ್ದು ಎಂದು ಹೇಳಿದರು. ಐಇಇಇ ಎನ್ನುವುದು ಕಲಿಕೆಗೆ ಒಂದು ಉತ್ತಮ ವೇದಿಕೆ, ಪ್ರತಿ ವಿಷಯದಲ್ಲಿಯೂ ಪರಿಣತರಾದ ತಜ್ಞರೊಂದಿಗೆ ಸಂವಾದಕ್ಕೆ ಇದು ಸಹಕಾರಿ, ಇದರ ಪ್ರಯೋಜನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆದುಕೊಳ್ಳುವಂತಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಮಾತನಾಡಿ, ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸದಲ್ಲಿ ಪ್ರೀತಿ ಇರಬೇಕು ಇದರಿಂದ ಹೃತ್ಪೂರ್ವಕತೆ ಮತ್ತು ತತ್ಪರತೆ ತಾನಾಗಿ ಬರುತ್ತದೆ ಅವುಗಳ ಸಹಾಯದಿಂದ ಕೌಶಲ್ಯವನ್ನು ಬೆಳೆಸಿಕೊಂಡು ದಕ್ಷತೆಯಿಂದ ಕೆಲಸಮಾಡಲು ಸಾಧ್ಯವಾಗುತ್ತದೆ ಎಂದರು. ತಾಂತ್ರಿಕತೆ ಎಷ್ಟೇ ಮುಂದುವರಿದರೂ ಪ್ರಕೃತಿಯ ಮುಂದೆ ನಾವು ಕುಬ್ಜರೇ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಈ ರಾಷ್ಟ್ರೀಯ ಸಮ್ಮೇಳನದ ಪೂರ್ಣ ಪ್ರಯೋಜನವು ಜನತೆಗೆ ಸಿಗುವಂತಾಗಬೇಕು. ನಿರಂತರವಾಗಿ ಎದುರಾಗುತ್ತಿರುವ ಪ್ರಾಕೃತಿಕ ವಿಕೋಪಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ ಮಾತನಾಡಿ ಕಲಿಕೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ನಿರಂತರ ಕಲಿಕೆಯಿಂದ ಮನಸ್ಸು ಸಂತೋಷಗೊಳ್ಳುತ್ತದೆ ಎಂದರು. ಸಂಶೋಧನೆಗೆ ವಿಷಯಗಳಿಲ್ಲ ಎಂದು ತಿಳಿದುಕೊಳ್ಳಬಾರದು ಸಮಾಜದ ಎಲ್ಲಾ ಸ್ಥರದಲ್ಲು ಸಾಕಷ್ಟು ಸುಧಾರಣೆಗಳು ಅಗತ್ಯವಿದೆ ಈ ವಿಷಯದ ಬಗ್ಗೆ ಸಂಶೋಧನಾ ನಿರತರು ಗಮಹರಿಸಬೇಕು ಎಂದರು. ಈ ಸಮ್ಮೇಳನದ ಪೂರ್ಣ ಪ್ರಯೋಜನವು ಎಲ್ಲರಿಗೂ ಸಿಗುವಂತಾಗಲಿ ಎಂದು ಅವರು ಹಾರೈಸಿದರು. ಸಮ್ಮೇಳನದ ಸಂಯೋಜಕ ಡಾ.ರಾಘವೇಂದ್ರ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.