ಚೆನೈ: ಆರು ಜನ ಲಷ್ಕರ್ ಉಗ್ರರು ಶ್ರೀಲಂಕಾ ಮೂಲಕ ಕೊಯಂಬತ್ತೂರಿಗೆ ನುಸುಳಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ತಮಿಳುನಾಡು ಪೊಲೀಸರು ಈ ವಿಷಯನ್ನು ಬಹಿರಂಗಪಡಿಸಿದ್ದಾರೆ ಮತ್ತು ಕೊಯಂಬತ್ತೂರಿನಲ್ಲಿ ಹೈ ಅಲರ್ಟ್ ಸ್ಥಿತಿ ನಿರ್ಮಾಣವಾಗಿದೆ.
ಐದು ಜನ ಲಂಕಾ ತಮಿಳರು ಮತ್ತು ಓರ್ವ ಪಾಕಿಸ್ತಾನಿ ನಾಗರಿಕ ಒಳಗೊಂಡಿರುವ ತಂಡ ನಗರಕ್ಕೆ ನುಸುಳಿದೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ತಮಿಳುನಾಡು ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.
ಈ ಸೂಚನೆಯನ್ನು ಆಧರಿಸಿ ಚೆನೈನಲ್ಲೂ ಸಹ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ. ಇನ್ನು ತಮಿಳುನಾಡಿಗೆ ನುಸುಳಿರುವ ಶಂಕಿತರಿಬ್ಬರ ಭಾವಚಿತ್ರಗಳನ್ನು ಕೊಯಮುತ್ತೂರು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.