ಕಡಬ ಸರಸ್ವತೀ ವಿದ್ಯಾಲಯ ಮತ್ತು ಶ್ರೀ ಭಾರತಿ ಶಿಶುಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ – ಕಹಳೆ ನ್ಯೂಸ್
ಹಿಂದೂ ಧರ್ಮದ ಗೀತಾಪೋದೇಶ ಮಾಡಿದ ಭಗವದ್ಗೀತೆಯ ಸಾರವನ್ನು ತಿಳಿಸುತ್ತಾ ಜೀವನದಲ್ಲಿ ಒಳ್ಳೆಯ ಸತ್ಕಾರ್ಯಗಳನ್ನು ಮಾಡುತ್ತಾ ಮುಂದೆ ಸಾಗೋಣ ಎಂದು ಕಾಶಿನಾಥ್ ದಾಮ್ಲೆ ಅರಸಿನಮಕ್ಕಿ ಹೇಳಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಬಾಲ್ಯದಲ್ಲಿ ಒತ್ತಡದ ಶಿಕ್ಷಣದ ಅಗತ್ಯವಿಲ್ಲ, ವಿದ್ಯಾರ್ಥಿಗಳ ಆಸಕ್ತಿಗನುಸಾರವಾದ ಶಿಕ್ಷಣಕ್ಕೆ ಪೋಷಕರು ಒತ್ತು ನೀಡಬೇಕು ಎಂದು ಹೇಳಿ ಕಾರ‍್ಯಕ್ರಮಕ್ಕೆ ಶುಭಹಾರೈಸಿದರು.
ಶ್ರೀಕೃಷ್ಣನ ಜೀವನ ಅವಧಿ ನಮಗೆ ಆದರ್ಶವಾಗಿದ್ದು ಮುಂದಿನ ಭವಿಷ್ಯದಲ್ಲಿ ಒಳ್ಳೆಯ ಕೆಲಸ ಮಾಡುವಂತಹ ಅವಶ್ಯಕತೆ ನಮ್ಮದಾಗಿದೆ. ನ್ಯಾಯ-ಅನ್ಯಾಯ, ಪಾಪ ಪುಣ್ಯಗಳ ಅರಿವನ್ನು ಮಕ್ಕಳಿಗೆ ತಿಳಿಸುತ್ತಾ ಗುರು ಹಿರಿಯರಿಗೆ ಗೌರವವನ್ನು ತೋರುವಂತಾಗಲಿ ಎಂದು ಸರಸ್ವತೀ ವಿದ್ಯಾಲಯದ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ ನುಡಿದರು.
ಶ್ರೀ ಭಾರತಿ ಶಿಶುಮಂದಿರ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೃಷ್ಣವೇಷ ಧರಿಸಿ ಕಡಬಪೇಟೆಯಲ್ಲಿ ಮೆರವಣಿಗೆಯ ಮೂಲಕ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಕುಣಿತ ಭಜನೆ ಆಕರ್ಷಣಿಯವಾಗಿತ್ತು.
ಕಾರ‍್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆಕರ‍್ಯದರ್ಶಿ ಕೃಷ್ಣ ಶೆಟ್ಟಿ ಕಡಬ, ಭಾರತಿ ಶಿಶುಮಂದಿರದ ವ್ಯವಸ್ಥಾಪಕಿ ಸವಿತಾ ಭಟ್, ಸರಸ್ವತೀ ಸಮೂಹಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರುಗಳಾದ ಶಿವಪ್ರಸಾದ್ ಮೈಲೇರಿ, ಲಿಂಗಪ್ಪ ಜೆ, ಎ.ಸೀತರಾಮ ಗೌಡ, ಉಮೇಶ್ ಶೆಟ್ಟಿ ಸಾಯಿರಾಮ್, ಪುಲಾಸ್ತ್ಯ ರೈ, ಶ್ರೀ ಭಾರತಿ ಶಿಶುಮಂದಿರದ ಆಡಳಿತ ಮಂಡಳಿಯ ಸದಸ್ಯರುಗಳಾದ ಗಿರೀಶ್ ಎ.ಪಿ, ರಾಮಚಂದ್ರ ಕೋಲ್ಪೆ, ಗುರುದೇವ್ ಹೆಬ್ಬಾರ್, ಸುದೀರ್ ಕಳಾರ, ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು.