Recent Posts

Sunday, January 19, 2025
ಸುದ್ದಿ

ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ರಂಗ – ಕಹಳೆ ನ್ಯೂಸ್

ಕಡಬ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಂತರ್ ತರಗತಿ ಸಾಂಸ್ರøತಿಕ ಸ್ಪರ್ಧೆಯು, ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಕಾಲೇಜಿನ ಪ್ರಾಂಶುಪಾಲ ಶ್ರೀ ಜನಾರ್ದನ ಕೆ ಎನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಂತರ್ ತರಗತಿ ಸಾಂಸ್ರøತಿಕ ಸ್ಪರ್ಧೆಗಳಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಪ್ರಥಮ, ದ್ವಿತೀಯ ಪಿಯುಸಿ ಕಲಾ ವಿಭಾಗ ದ್ವಿತೀಯಾ, ಹಾಗೂ ದ್ವಿತೀಯ ಪಿಯುಸಿ ವಿಜ್ನಾನ ವಿಭಾಗ ತೃತೀಯ ಸ್ಥಾನವನ್ನು ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಇ ಸಿ ಚೆರಿಯನ್ ಬೇಬಿ ನಿವೃತ ಪ್ರಾಂಶುಪಾಲರು, ಜನಾರ್ದನ ಗೌಡ ಪಣೆಮಜಲು, ದಯಾನಂದ ಉಂಡಿಲ, ಪ್ರದೀಪ್ ಕೋಲ್ಪೆ ಉದ್ಯಮಿ, ಸಂತೋಷ್ ಪಟ್ಣ, ಉದಯ ಆಚಾರ್ಯ ಭಾಗವಹಿಸಿದ್ದರು. ವಿಜೇತ ತಂಡಕ್ಕೆ ಟ್ರೋಫಿಯನ್ನು ವಿತರಿಸಲಾಯಿತು. ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ಸ್ವಾಗತಿಸಿದರು, ಶ್ರೀಮತಿ ಲಾವಣ್ಯ ವಿಜೇತರ ಪಟ್ಟಿ ವಾಚಿಸಿದರು. ಸಲೀನ್ ರಾಜ್ಯಶಾಸ್ತ್ರ ಉಪನ್ಯಾಸಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.