ನವದೆಹಲಿ: ದೇಶದ ಅತೀದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾತಿದೆ.
ಆಗಸ್ಟ್ 26ರಿಂದ ಹೊಸ ಬಡ್ಡಿ ದರ ಜಾರಿಗೆ ಬರಲಿದೆ. ಶೇ.0.5ರಷ್ಟು ಬಡ್ಡಿ ದರ ಇಳಿಕೆ ಮಾಡಿದೆ. 7 ರಿಂದ 45 ದಿನಗಳ ಠೇವಣಿಯ ಬಡ್ಡಿಯನ್ನು ಶೇ.5ರಿಂದ ಶೇ.4.5 ಕ್ಕೆ, 46 ದಿನಗಳಿಂದ 179 ದಿನಗಳು ಹಾಗೂ 180 ದಿನಗಳಿಂದ ಒಂದು ವರ್ಷದವರೆಗಿನ ಠೇವಣಿ ಬಡ್ಡಿ ದರದಲ್ಲಿ ಶೇ.0.25 ರಷ್ಟು ಇಳಿಕೆ ಮಾಡಿದೆ. ಸದ್ಯ ಶೇ. 5.5 ಹಾಗೂ ಶೇ. 6 ಬಡ್ಡಿ ದರ ನಿಗದಿಯಾಗಿದೆ.
ಇನ್ನು 1-2 ವರ್ಷಗಳ ಅವಧಿಯ ಠೇವಣಿಗೆ ಶೇ. 6.70 ಬಡ್ಡಿ ನಿಗದಿಸಲಾಗಿದ್ದು, ಶೇ. 0.10 ರಷ್ಟು ಇಳಿಕೆ ಮಾಡಲಾಗಿದೆ. ಇತ್ತೀಚೆಗೆ ಆರ್‍ಬಿಐ ರೆಪೋ ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಎಸ್‍ಬಿಐ ಬಡ್ಡಿ ದರ ಇಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಇತರ ಬ್ಯಾಂಕ್‍ಗಳೂ ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆಯಿದೆ.