Saturday, November 23, 2024
ಸುದ್ದಿ

ಫಿಲೋಮಿನಾದಲ್ಲಿ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳಿಗೆ ಕ್ಷೇತ್ರಕಾರ್ಯ ಮಾಹಿತಿ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕ್ಷೇತ್ರ ಕಾರ್ಯದ ಬಗ್ಗೆ ಪ್ರಾಥಮಿಕ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಯಿತು.

ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರಕಾರ್ಯ ಅಧ್ಯಯನವು ಪ್ರಧಾನ ಪಾತ್ರ ವಹಿಸುತ್ತದೆ. ತರಗತಿಯಲ್ಲಿ ಪಡೆದ ಜ್ಞಾನವನ್ನು ಸಮುದಾಯದಲ್ಲಿ ಕೌಶಲ್ಯಯುತವಾಗಿ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡು ವೃತ್ತಿಪರರಾಗಲು ಬದ್ಧರಾಗಬೇಕು. ಗ್ರಾಮ ಮಟ್ಟದ ಅಧ್ಯಯನವನ್ನು ಕಾರ್ಯಗತಗೊಳಿಸುವ

ಜಾಹೀರಾತು
ಜಾಹೀರಾತು
ಜಾಹೀರಾತು

ಸಂದರ್ಭದಲ್ಲಿ ಸ್ಥಳೀಯಾಡಳಿತದ ಸಹಕಾರವನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿ ಬದುಕಿನಲ್ಲಿ ಆಸಕ್ತಿ ಮತ್ತು ಸಂಪೂರ್ಣ ತೊಡಗಿಸಿಕೊಳ್ಳುವ ಪ್ರವೃತ್ತಿ ಅತಿ ಮುಖ್ಯ ಎಂದು ಬೆಳ್ತಂಗಡಿಯ ಕಪುಚಿನ್ ಕೃಷಿಕ್ ಸೇವಾ ಸಂಘ ಇದರ ಯೋಜನಾಧಿಕಾರಿ ಸಿದ್ಧಾಂತ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಾಗಾರದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಬೋಸ್ಕೊ ಸಂಸ್ಥೆಯ ಯೋಜನಾಧಿಕಾರಿ ಜಾನ್‍ಸನ್, ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಕುರಿತು ಮಾಹಿತಿ ನೀಡುತ್ತಾ, ಸಮಾಜಕಾರ್ಯ ಕಾರ್ಯಕರ್ತರ ಪಾತ್ರವನ್ನು ವಿವರಿಸಿದರು.

ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರತಿಭಾ ಕೆ, ಸಚಿನ್ ಕುಮಾರ್ ಮತ್ತು ದೀಪಿಕಾ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶೀತಲ್ ಕುಮಾರ್ ಕೆ ವಿ ಸ್ವಾಗತಿಸಿ, ವಿದ್ಯಾರ್ಥಿನಿ ಸಾರಮ್ಮ ವಂದಿಸಿದರು.