ಬಳ್ಳಾರಿ: ನಾವು ನಿಜವಾಗಿಯೂ ಹಠವಾದಿಗಳು. ಯಾವುದೋ ನಾಯಿ ಬೀದಿಯಲ್ಲಿ ನಿಂತೂ ಬೊಗಳಿದ್ರೆ ನಾವೂ ತಲೆಕೆಡಿಸಿಕೊಳ್ಳಲ್ಲ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಮಣ್ಣಿನ ಬಗ್ಗೆ ನಮ್ಮ ಕಮಿಟ್ಮೆಂಟ್ ಇದೆ. ನಾವೂ ಭಾಷಣ ಮಾಡಲು ಬಂದಿಲ್ಲ. ಬಳ್ಳಾರಿಯಲ್ಲಿ ಕೌಶಲ್ಯ ತರಬೇತಿ ವಿಶ್ವವಿದ್ಯಾಲಯ ಸ್ಪಾಪನೆಗೆ ನಾವೂ ಸಿದ್ಧವಿದ್ದೇವೆ. ಜಮೀನು ನೀಡಲು ಯಾರು ಮುಂದೆ ಬರ್ತಾರೋ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧ. ನಾವೂ ನಿಜವಾಗಿಯೂ ಹಠವಾದಿಗಳು. ಬೊಗಳುವ ನಾಯಿಗಳಿಗೆ ನಾವೂ ತೆಲೆಕೆಡಿಸಿಕೊಳ್ಳಲ್ಲ ಅಂತ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ರು.
ಪ್ರತಿ ವರ್ಷ 2 ಕೋಟಿ ಜನರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಭಾರತ ಕೌಶಲ್ಯ ತರಬೇತಿಯ ಹಬ್ ಆಗುತ್ತಿದೆ. ನಮ್ಮ ವ್ಯಕ್ತಿತ್ವವನ್ನು, ಬದುಕನ್ನು ನಾವೂ ರೂಪಿಸಿಕೊಳ್ಳಬೇಕಿದೆ ನಾನು ಮತ ಕೇಳಲು ಬಂದಿಲ್ಲ, ಪ್ರಧಾನ ಮಂತ್ರಿಯವರ ಕನಸು ನನಸು ಮಾಡಬೇಕಿದೆ. ಉದ್ಯೋಗ ಯಾರಿಗೆ ಸಿಗಲ್ಲವೋ ಅವರಿಗೆ ಕೌಶಲ್ಯ ತರಬೇತಿ ಅವಶ್ಯವಾಗಿದೆ ಅಂದ್ರು.
ಕನ್ನಡದವರು ಕನ್ನಡ ಮಾತನಾಡಿ, ತೆಲಗು ಬಂದವರು ತೆಲುಗಿನಲ್ಲಿ ಮಾತನಾಡಿ, ನಮಗೆ ಇಂಗ್ಲಿಷ್ ಅಮ್ಮ ಯಾಕೆ ಬೇಕು. ಭಾಷೆ ಇರೋದು ಸಂಹವನಕ್ಕೆ, ಸ್ಟೈಲ್ ಹೊಡೆಯಲು ಅಲ್ಲ. ನಮಗೆ ಸ್ಟೈಲ್ ಬೇಕಿಲ್ಲ. ನಮಗೆ ಭಾಷೆ ಅರ್ಥ ಆಗಬೇಕು. ಯಾರಿಗೋ ಅರ್ಥ ಮಾಡಿಸಲು ನಾನು ನನ್ನ ತಾಯಿಯನ್ನು ಬೇವರ್ಸಿ ಮಾಡಲು ಸಿದ್ಧನಿಲ್ಲ. ನಾನು ಇದ್ದುದನ್ನು ಇದ್ದ ಹಾಗೆ ಹೇಳುವ ವ್ಯಕ್ತಿ. ಯಾರಾದ್ರೂ ಒಪ್ಪಿಕೊಳ್ಳಲಿ ಬಿಡಲಿ ನಾನು ಇರೋದೆ ಹೀಗೆ ಅನ್ನೋ ವ್ಯಕ್ತಿ ಅಂತ ಹೇಳಿದ್ರು.
ವರದಿ : ಕಹಳೆ ನ್ಯೂಸ್