Saturday, September 21, 2024
ಸುದ್ದಿ

ಪುತ್ತೂರಿನ ವಿವೇಕಾನಂದ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ‘ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮ ನಡೆಯಿತು.
ಭಾರತದಲ್ಲಿ ಪತ್ರಿಕೋದ್ಯಮ ಬಹಳ ವೇಗವಾಗಿ ಬೆಳವಣಿಗೆಯನ್ನು ಕಂಡುಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾಧ್ಯಮಗಳ ನಡುವಿನ ಪೈಪೋಟಿ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಇಲ್ಲಿ ಸುದ್ದಿಯ ಹರಡುವಿಕೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅಲ್ಲದೇ ಜನರಿಗೆ ಮುಖ್ಯವಾಗಿ ತಿಳಿಯಬೇಕಾದ ಮಾಹಿತಿಯನ್ನು ಸ್ಪಷ್ಟವಾಗಿ ಪತ್ರಿಕೋದ್ಯಮ ತಲುಪಿಸುವ ಕಾರ್ಯ ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ಧನಾತ್ಮಕ ಅಂಶಗಳಿದ್ದರೆ ಇನ್ನು ಕೆಲವು ಋಣಾತ್ಮಕ ಅಂಶಗಳು ಕೇಳಿಬರುತ್ತದೆ. ಆದರೆ, ಇಲ್ಲಿ ಪತ್ರಕರ್ತನಾದವನು ಸಮಾಜಕ್ಕಾಗಿ ಅದರೊಂದಿಗೆ ತನ್ನ ವೃತ್ತಿಗೆ ನಿಷ್ಠೆಯಿಂದ ದುಡಿಯುತ್ತಾನೆ. ಏಕೆಂದರೆ, ಬಹಳಷ್ಟು ಬಾರಿ ಮನುಷ್ಯತ್ವದೊಂದಿಗೆ ಕರ್ತವ್ಯವನ್ನೂ ಸಮವಾಗಿ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಪತ್ರಕರ್ತನಾದವನಿಗಿರಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ದಿಗ್ವಿಜಯ ನ್ಯೂಸ್ ಚಾನಲ್‍ನ ಪತ್ರಕರ್ತ ಪ್ರಶಾಂತ್ ಬಿ. ಆರ್. ಹೇಳಿದರು.

ಜಾಹೀರಾತು

ಕಾಲೇಜಿನ ಐ.ಕ್ಯು.ಎ.ಸಿ. ಸಂಘದ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಚ್. ಜಿ. ಮಾತನಾಡಿ, ದೂರದರ್ಶನದಲ್ಲಿ ಹಲವಾರು ಹಂತಗಳು ದಾಡಿದ ಮೇಲೆಯೇ ಒಂದು ಸಂಪೂರ್ಣ ಕಾರ್ಯಕ್ರಮ ಟಿವಿ ಪರದೆ ಮೇಲೆ ಮೂಡಿ ಬರಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ಇಲ್ಲಿ ಪ್ರಾಥಮಿಕ ಹಂತವಾದ ವರದಿಗಾರಿಕೆಯಲ್ಲಿನ ಸವಾಲು, ಸಮಸ್ಯೆ ಎಲ್ಲವನ್ನೂ ಅರಿತುಕೊಂಡು ನಡೆಯಬೇಕು.

ಏಕೆಂದರೆ, ವೀಕ್ಷಕರೆಲ್ಲರೂ ಗುಣಮಟ್ಟದ ಕಾರ್ಯಕ್ರಮವನ್ನೇ ಬಯಸುತ್ತಾರೆ ಹಾಗಾಗಿ ಇದು ಕೌಶಲ್ಯಭರಿತ ಕೆಲಸ ಎಂದು ಹೇಳಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ರಾಧಿಕಾ ಕಾನತ್ತಡ್ಕ ಉಪಸ್ಥಿತರಿದ್ದರು.
ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.