Saturday, November 23, 2024
ಸುದ್ದಿ

ಮಂಗಳೂರಿನಲ್ಲಿ ಶಂಕಿತ ಡೆಂಗ್ಯೂಗೆ ವಿದ್ಯಾರ್ಥಿನಿ ಬಲಿ – ಕಹಳೆ ನ್ಯೂಸ್

ಮಂಗಳೂರು : ಶಂಕಿತ ಡೆಂಗ್ಯೂ ಜ್ವರಕ್ಕೆ ಮಂಗಳೂರು ನಗರದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ ಜ್ವರಕ್ಕೆ ಬಲಿಯಾದವರ ಸಂಖ್ಯೆ 11ರ ಗಡಿ ದಾಟಿದೆ.

ಬಂಟ್ವಾಳದ ಸಾಲೆತ್ತೂರು ನಿವಾಸಿ ಮಧುಶ್ರೀ (19) ಮೃತ ವಿದ್ಯಾರ್ಥಿನಿ. ಮಂಗಳೂರು ನಗರದ ಖಾಸಗಿ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧುಶ್ರೀ ಡೆಂಗ್ ಜ್ವರದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೂರು ದಿನಗಳ ಹಿಂದೆಯಷ್ಟೇ ಮನೆಗೆ ಹೋಗಿದ್ದರು. ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ಆಕೆಗೆ ಗುರುವಾರ ತಡರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಯುವತಿಯ ಸಾವಿಗೆ ಡೆಂಗ್ ಕಾರಣವಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
“ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮಮುಖಳಾಗಿ ಬಿಡುಗಡೆಯಾಗಿದ್ದಳು. ಅವಳ ರಕ್ತದ ಪ್ಲೇಟ್‍ಲೆಟ್ ಕೂಡ ನಿಯಂತ್ರಣಕ್ಕೆ ಬಂದಿತ್ತು.

ಬಳಿಕ ಎದೆ ನೋವು ಹಾಗೂ ಶ್ವಾಸಕೋಶದ ಸೋಂಕಿನಿಂದ ಆಕೆ ಮೃತಪಟ್ಟಿದ್ದಾಳೆ” ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‍ಚಂದ್ರ ತಿಳಿಸಿದ್ದಾರೆ.