Friday, September 20, 2024
ಸುದ್ದಿ

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಮಣಿಕರ್ಣಿಕ ಮಾತುಗಾರರ ವೇದಿಕೆ’ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸುವ ‘ಮಣಿಕರ್ಣಿಕ ಮಾತುಗಾರರ ವೇದಿಕೆ’ ಕಾರ್ಯಕ್ರಮವು ‘ನಾನು ನನ್ನ ಕನಸು’ ಎಂಬ ವಿಷಯದ ಕುರಿತು ನಡೆಯಿತು.

.ನಾವು ನಿದ್ದೆ ಮಾಡುವಾಗ ಬೀಳುವ ಕನಸು ಕನಸಲ್ಲ, ಯಾವ ಕನಸು ನಿದ್ದೆ ಮಾಡಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು. ನಾವು ಕಾಣುವ ಕನಸಿನಲ್ಲಿ ಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ವೃದ್ಧಿಸಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಯೊಬ್ಬರ ಭಾರತೀಯನು ಕನಸಿನಲ್ಲಿ ದೇಶವನ್ನು ಕಟ್ಟುವ ಕನಸನ್ನು ಕಾಣಬೇಕು. ಆಗ ನಮ್ಮ ಯೋಚನೆ ಹಾಗೂ ಜೀವನ ಶೈಲಿ ಭಾರತೀಯರನ್ನಾಗಿಸುತ್ತದೆ. ಉತ್ತಮ ದೃಷ್ಟಿಕೋನದೊಂದಿಗೆ ನಾವು ಕಾಣುವ ಕನಸನ್ನು ವೃದ್ಧಿಸುವ ಮೂಲಕ ದೇಶವನ್ನು ವಿಶ್ವಗುರುವನ್ನಾಗಿಸಬಹುದು ಎಂದು ವಿವೇಕಾನಂದ ಪದವಿ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀದೇವಿ ಎಂ. ಹೇಳಿದರು.

ಜಾಹೀರಾತು

ಉತ್ತಮ ಮಾತುಗಾರರಾಗಿ ತೃತೀಯ ವರ್ಷದ ವಿದ್ಯಾರ್ಥಿ ಶ್ರೀವತ್ಸ ಭಾರದ್ವಾಜ್ ಹಾಗೂ ನೆಚ್ಚಿನ ಮಾತುಗಾರನಾಗಿ ಸಂಪತ್ ಕುಮಾರ್ ಆಯ್ಕೆಯಾದರು.

ತೃತೀಯ ಪತ್ರಿಕೋದ್ಯಮ ತರಗತಿಯು ಉತ್ತಮ ಮಾತುಗಾರರ ತಂಡವಾಗಿ ಹೊರಹೊಮ್ಮಿತು. ವಿದ್ಯಾಥಿಗಳಾದ ಅರುಣ್ ಕುಮಾರ್, ಅನಘಾ, ಧನ್ಯಾ, ಕಾರ್ತಿಕ್ ಕುಮಾರ್, ರಾಮ್ ಕಿಶನ್, ದೀಕ್ಷಿತಾ, ತನುಶ್ರೀ, ಪ್ರಶಾಂತ್, ಸಂಪತ್ ಕುಮಾರ್, ಸ್ಫೂರ್ತಿ, ಚರಿಷ್ಮಾ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಹಾಗೂ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದ ಕಾರ್ಯದರ್ಶಿ ತೇಜಶ್ರೀ ಪಿ.ವಿ. ಉಪಸ್ಥಿತರಿದ್ದರು.

ತೃತೀಯ ವರ್ಷದ ವಿದ್ಯಾರ್ಥಿ ಪ್ರಜ್ಞಾ ಸ್ವಾಗತಿಸಿ,  ಅನ್ವಿತಾ ವಂದಿಸಿದರು. ಅನಘಾ ಕಾರ್ಯಕ್ರಮ ನಿರೂಪಿಸಿದರು.