Monday, January 20, 2025
ಸುದ್ದಿ

ಪುತ್ತೂರಿನ ಫಿಲೋಮಿನಾದಲ್ಲಿ ‘ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ’ಕಾರ್ಯಗಾರ- ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಐಕ್ಯೂಎಸಿ ಸಹಯೋಗದೊಂದಿಗೆ ಸ್ಪಂದನ ಸಭಾಭವನದಲ್ಲಿ ‘ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ’ ಎಂಬ ವಿಷಯದ ಕುರಿತು ಕಾರ್ಯಗಾರ ನಡೆಯಿತು.
ಸಂವಿಧಾನದ ಬಿಕ್ಕಟ್ಟು ಸೃಷ್ಟಿಯಾದಾಗ ಪ್ರಶ್ನೆ ಮಾಡುವ ಪ್ರಜ್ಞೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂವಿಧಾನವು ಭಗವದ್ಗೀತೆ, ಬೈಬಲ್, ಕುರಾನ್‍ಗಿಂತಲೂ ಶ್ರೇಷ್ಟ ಗ್ರಂಥ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಬರುವ ತನಕ ಸಂವಿಧಾನದ ಉದ್ದೇಶ ಈಡೇರಲಾರದು. ಜನರ ಪ್ರತಿಕ್ರಿಯೆಯೇ ಶೂನ್ಯವಾಗಿರುವಾಗ ಪ್ರಜಾಪ್ರಭುತ್ವವೇ ವಿಫಲವಾದಂತಲ್ಲವೇ? ಆಡಳಿತ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಎತ್ತುವ ಮನೋಸ್ಥಿತಿ ಉಂಟಾಗಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾತಿಗಿಂತ ಮಿಗಿಲು ದೇಶ ಎಂಬುವುದನ್ನು ಒಪ್ಪಿಕೊಳ್ಳುವ ಭಾವನೆ ಬೆಳೆಸಿಕೊಳ್ಳಬೇಕು. ಪ್ರಾದೇಶಿಕ ಸಂಸ್ಕ್ರತಿಯನ್ನು ಉಳಿಸಿಕೊಳ್ಳಬೇಕು. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕ್ರತಿಕ ಅಂತರಗಳನ್ನು ಕಡಿಮೆ ಮಾಡಿಕೊಳ್ಳಬೇಕು. ನೀನು ಬದುಕು, ಇತರರನ್ನು ಬದುಕಲು ಬಿಡು ತತ್ವವನ್ನು ಪಾಲಿಸಬೇಕು.

ಬೇರೆಯವರ ಹಕ್ಕುಗಳನ್ನು ಗೌರವಿಸದವರಿಗೆ ಪ್ರಜಾಪ್ರಭುತ್ವ ಅರ್ಥವಾಗಲಾರದು ಎಂದು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ| ಪ್ರಭಾಕರ ಶಿಶಿಲ ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ದಿನಕರ ರಾವ್ ಸ್ವಾಗತಿಸಿದರು. ವಿದ್ಯಾರ್ಥಿನಿ ಚೇತನಾ ವಂದಿಸಿ, ಸಿ| ಅನ್ನಮ್ಮ ನಿರೂಪಿಸಿದರು.