Monday, January 20, 2025
ಸುದ್ದಿ

ಕಾನರ್ಪದಲ್ಲಿ ಮಹಿಳೆಯರಿಗೆ ಟೈಲರಿಂಗ್ ತರಭೇತಿ ಹಾಗೂ ಸಮಾರೋಪ ಕಾರ್ಯಕ್ರಮ- ಕಹಳೆ ನ್ಯೂಸ್

ಉಜಿರೆ: ಚಿರಂಜೀವಿ ಯುವಕ ಮಂಡಲ ಕಾನರ್ಪ, ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಶ್ರೀ ದುರ್ಗಾಶಕ್ತಿ ಮಹಿಳಾ ಸಂಘ ಕಾನರ್ಪ ಇದರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಭೇತಿಯನ್ನು ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ತರಬೇತಿಯ ಸಮಾರೋಪ ಸಮಾರಂಭದಲ್ಲಿ ನೆಹರುಯುವ ಕೇಂದ್ರದ ಸಮನ್ವಯಕ ಸಾಂತಪ್ಪ ಮಾತನಾಡಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕಾಗಿದ್ದುದರಿಂದ ಇಂತಹ ತರಬೇತಿಗಳು ಅವಶ್ಯಕವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತರಬೇತಿಯಲ್ಲಿ ಪಾಲ್ಗೊಂಡ ಎಲ್ಲರು ಸ್ವ-ಉದ್ಯೋಗ ಮಾಡಿಕೊಂಡು ಮಾದರಿಯಾಗಬೇಕು ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಜಯದೇವ್ ಸಿ.ಆರ್.ಪಿ ಅಣಿಯೂರು, ನೆಹರುಯುವ ಕೇಂದ್ರದ ಪ್ರತಿನಿಧಿ ತೀಕ್ಷಿತ್ ದಿಡುಪೆ, ಗ್ರಾಮ ಪಂಚಾಯತ್ ಸದಸ್ಯೆ ರೇಣುಕಾ, ಸುಮಿತ್ರ ರಾಮಂದೊಟ್ಟು, ಹರಿಪ್ರಸಾದ್ ಭಟ್ ಹಿತ್ತಿಲಕೋಡಿ, ಜಗದೀಶ ಸಾಲಿಯಾನ್ ಕಾನರ್ಪ, ಯುವಕ ಮಂಡಲದ ಗೌರವಾಧ್ಯಕ್ಷ ಬಾಲಕೃಷ್ಣಗೌಡ ಮಾವಿನಕಟ್ಟೆ ಯುವಕ ಮಂಡಲದ ಅಧ್ಯಕ್ಷ ಜನಾರ್ಧನ ಕಾನರ್ಪ ಉಪಸ್ಥಿತರಿದ್ದರು.

ಜಯರಾಜ್ ಸಾಲಿಯಾನ್ ಸ್ವಾಗತಿಸಿ ರಾಜೇಶ.ಎಂ ಕಾನರ್ಪ ಕಾರ್ಯಕ್ರಮ ನಿರೂಪಿಸಿದರು.