Tuesday, January 21, 2025
ಸುದ್ದಿ

ನಿಗಂಬೋದ್ ಘಾಟ್‍ನಲ್ಲಿ ನಡೆಯಲಿದೆ ಜೇಟ್ಲಿಯವರ ಅಂತ್ಯಕ್ರಿಯೆ ಕಾರ್ಯ –ಕಹಳೆ ನ್ಯೂಸ್

ನವದೆಹಲಿ: ಕೇಂದ್ರದ ಮಾಜಿ ವಿತ್ತ ಮಂತ್ರಿ, ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರ ಮೃತದೇಹವನ್ನು ಭಾನುವಾರ ಬೆಳಗ್ಗೆ ಬಿಜೆಪಿ ಕೇಂದ್ರ ಕಚೇರಿಗೆ ಕರೆತರಲಾಯಿತು. ಅಲ್ಲಿ ಜೇಟ್ಲಿ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳು ತಮ್ಮ ಅಗಲಿದ ನಾಯಕನಿಗೆ ಅಂತಿಮ ದರ್ಶನ ನೀಡಿ ಗೌರವ ನಮನ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅರುಣ್ ಜೇಟ್ಲಿಯವರು ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಜೇಟ್ಲಿಯವರ ಕಳೇಬರವನ್ನು ಕೈಲಾಶ್ ಕಾಲೊನಿ ನಿವಾಸದಿಂದ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಗೆ ಕರೆತರಲಾಯಿತು. ಇಂದು ಮಧ್ಯಾಹ್ನದವರೆಗೆ ಬಿಜೆಪಿ ಕಚೇರಿಯ ಪತ್ರಿಕಾಗೋಷ್ಠಿ ಕೊಠಡಿಯಲ್ಲಿ ಇರಿಸಲಾಗುತ್ತಿದ್ದು ಅಲ್ಲಿಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೋಗಿ ಅಂತಿಮ ನಮನ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಕಚೇರಿಯಲ್ಲಿ ಈಗ ಜೇಟ್ಲಿಯವರ ಪುತ್ರ, ಪತ್ನಿ ಹಾಗೂ ಸಂಬಂಧಿಕರು ಇದ್ದಾರೆ. ಇಂದು ಅಪರಾಹ್ನ 2.30ರ ಸುಮಾರಿಗೆ ಯಮುನಾ ನದಿ ತೀರದಲ್ಲಿರುವ ನಿಗಂಬೋದ್ ಘಾಟ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜೇಟ್ಲಿಯವರ ಅಂತ್ಯಕ್ರಿಯೆ ನೆರವೇರಲಿದೆ.