Recent Posts

Tuesday, January 21, 2025
ಸುದ್ದಿ

ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ಕುಕ್ಕೇ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳ ತಂಡ – ಕಹಳೆ ನ್ಯೂಸ್

ಮಡಂತ್ಯಾರ್: ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯಲ್ಲಿ ಅ 22ರಂದು ನಡೆದ ದಕ್ಷಿಣಕನ್ನಡ ಜಿಲ್ಲಾಮಟ್ಟದ ಪ್ರಾಥಮಿಕ ಹಾಗು ಪ್ರೌಢ ಶಾಲಾ ಬಾಲಕ -ಬಾಲಕಿಯರ  ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ, ಕುಕ್ಕೇ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಕಾರ್ತಿಕ್. ಎಲ್, ಪ್ರಾರ್ಥನ್ ಎಸ್. ಜಿ, ಲವೀತ್ ಎಮ್. ಅರ್, ಹಾಗು ನಿಹಾಲ್ ಬಿ. ಎಲ್ ವಿದ್ಯಾರ್ಥಿಗಳ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ಪಂದ್ಯಾಟ ಮೈಸೂರು ಚಾಮರಾಜ ನಗರದಲ್ಲಿ ನಡೆಯಲಿದ್ದು, ಈ ಪಂದ್ಯಾಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಚಾಮರಾಜ ನಗರದಲ್ಲಿ ನಡೆಯುವ ವಿಭಾಗೀಯ ಪಂದ್ಯಾಟದಲ್ಲಿ ಗೆದ್ದರೆ ಮುಂದೆ ರಾಜ್ಯ ಮಟ್ಟ ಪಂದ್ಯಾಟಕ್ಕೆ ಆಯ್ಕೆಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು