Tuesday, January 21, 2025
ಸುದ್ದಿ

ಪುತ್ತೂರು ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ನ ಆಶ್ರಯದಲ್ಲಿ ಪರಿಹಾರ ನಿಧಿ ವಿತರಣಾ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ (ರಿ) ಪುತ್ತೂರು. ಇದರ ಆಶ್ರಯದಲ್ಲಿ  ಊರ-ಪರವೂರ ಸಮಸ್ತ ದಾನಿಗಳ ಸಹಕಾರದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯ ವೇದಿಕೆಯಲ್ಲಿ ಪರಿಹಾರ ನಿಧಿ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಂಗಳೂರು ಶಕ್ತಿನಗರ ನಿವಾಸಿ  ಚಂದ್ರಶೇಕರರವರಿಗೆ ರೂ.10,000ರೂ, ಗಂಟಲು ಕ್ಯಾನ್ಸರ್‍ನಿಂದ ಬಳಲುತ್ತಿರುವ ಮುರ ನಿವಾಸಿ ಚಂದ್ರಶೇಖರ ಭಂಡಾರಿಯವರಿಗೆ 10,000ರೂ, ಮೆದುಳು ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಂಗಳೂರು ಬಜಪೆ ಸಮೀಪದ ಪೇರಾರದ ಮಾ.ಕೃಷ್ಣ ಎಂಬವರಿಗೆ 10,000 ರೂ, ಮತ್ತು ಸುಳ್ಯ ತಾಲೂಕು ಜಲ್ಸುರು ಬೈತಡ್ಕ ಮನೆಯ ವಿಕಲ ಚೇತನ ವಿ. ಸೆಲ್ವರಾಜ್‍ರವರಿಗೆ ವೀಲ್ ಚಯರ್‍ನ್ನು ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ನಿವೃತ್ತ ಯೋಧ ಮಂಜುನಾಥ್, ‘ಪೂವರಿ’ ವಾರ ಪತ್ರಿಕೆಯ ಪ್ರಧಾನ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ನಿವೃತ್ತ ಶಿಕ್ಷಕಿ ಶ್ರೀಮತಿ ಎಚ್.ಶಾಂಭವಿ ಶೆಟ್ಟಿ, “ಸೈಮಾ ಅವಾರ್ಡ್-2019”  ಪ್ರಶಸ್ತಿ ವಿಜೇತ ಚಲನಚಿತ್ರ ನಟ ಪ್ರಕಾಶ್ ಕೆ ತುಮಿನಾಡ್, ರಕ್ತದಾನಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ನಡುಬೈಲ್ ಗುತ್ತು ಇವರನ್ನು ಸನ್ಮಾಯಿಸಲಾಯಿತು.

ನಂತರ ಸುಮಾರು 25 ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ನಂತರ  ಸಾಂಸ್ಕೃತಿಕ  ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಾರದಾ ಆಟ್ರ್ಸ್ ಮಂಜೇಶ್ವರ ಕಲವಿದೆರ್ ನಾಟಕ ತಂಡದದವರಿಂದ “ಉತ್ತರ ಕೋರ್ಲೇ” ಎಂಬ ನಾಟಕವು ವೇದಿಕೆಯಲ್ಲಿ ಪ್ರದರ್ಶನಗೊಂಡಿತು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಪುರುಷೋತ್ತಮ ಕೋಲ್ಪೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಟ್ರಸ್ಟ್‍ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.