Monday, November 25, 2024
ಸುದ್ದಿ

ಮಳೆಗೆ ಕೊಚ್ಚಿ ಹೋಗಿದ್ದ ರಸ್ತೆ ದುರಸ್ತಿಗೆ ಸಕಾಲದಲ್ಲಿ ಅನುದಾನ ನೀಡಿದ ಶಾಸಕ ಹರೀಶ್ ಪೂಂಜಾ – ಕಹಳೆ ನ್ಯೂಸ್

ಕಳೆದ ಹತ್ತು ದಿನಗಳ ಹಿಂದೆ ಸುರಿದ ಕುಂಭದ್ರೋಣ ಮಳೆಗೆ ಇಡೀ ಬೆಳ್ತಂಗಡಿ ತಾಲೂಕು ನಲುಗಿ ಹೋಗಿತ್ತು. ಸದ್ಯ ಮಳೆ ಏನೋ ಬಿಡುವು ನೀಡಿದೆ. ಆದರೆ ಮಳೆಯಿಂದ ಆದ ಹಾನಿ ಅಪಾರ. ವಿಪರೀತ ಮಳೆಯಿಂದಯಾಗಿ ಬಂದಾರು ಗ್ರಾಮದ ಮಣ್ಣಿನ ರಸ್ತೆಯೊಂದು ಸಂಪೂರ್ಣ ಕೊಚ್ಚಿ ಹೋಗಿತ್ತು. ಹಾಗಾಗಿ ಈ ರಸ್ತೆಯಲ್ಲಿ ಓಡಾಡುವುದೇ ಬಹಳ ಕಷ್ಟವಾಗಿತ್ತು. ಈ ರಸ್ತೆ ಬಂದಾರು ಗ್ರಾಮದ ಶಿವನಗರದಿಂದ ಕೇದಗೆ ಕೊಡಿ, ಸುಣ್ಣಾನ, ನಾವುಳೆ, ಬಚ್ಚಿರಪಲ್ಕೆ, ಕೊಂಬೇಡಿಗೆ ಸ೦ಪರ್ಕ ಕಲ್ಪಿಸುತ್ತದೆ. ಹಾಗೂ ದಿನಿತ್ಯ ನೂರಾರು ಮಂದಿ ಈ ಮಾರ್ಗ ಮೂಲಕ ಓಡಾಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಸುಲಲಿತವಾಗಿ ಓಡಾಡಲು ಉಪಯೋಗ ಆಗುವಂತೆ ಸುಮಾರು 2 ಕೀಲೋ ಮೀಟರ್ ಉದ್ದದ ರಸ್ತೆಗೆ ಚರಳು (ಜಲ್ಲಿ )ಹಾಕಲು 1 ಲಕ್ಷ ರೂ ಅನುದಾನ ತಂದು ಕೊಟ್ಟು ಜನರ ಸಮಸ್ಯಗೆ ಶಾಸಕ ಹರೀಶ್ ಪೂಂಜಾ ಅವರು ಸಕಾಲದಲ್ಲಿ ಸ್ಪಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಫಲಾನುಭವಿಗಳು ಅವರಿಗೆ ಅಭಿನಂದನೆಯನ್ನು ಸಲ್ಲಿಸುವ ಮೂಲಕ ಅವರ ಕಾರ್ಯಕ್ಕೆ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಪಂಚಾಯತ್ ಸದಸ್ಯರಾದ ದಿನೇಶ್ ಗೌಡ ಮತ್ತು ರೂಪಾ ವಿಶ್ವಕರ್ಮ ಮತ್ತು ಊರಿನ ಗಣ್ಯರು ಹಾಜರಿದ್ದರು.