ಸುಬ್ರಹ್ಮಣ್ಯ : ಈ ಹಿಂದೆ ಸುರಿದ ಭಾರೀ ಮಳೆಗೆ ಜಿಲ್ಲೆಯಾದ್ಯಂತ ಜಲ ಪ್ರವಾಹವೇ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿ ಎರಡನೇಯ ಹಂತದ ಸ್ವಚ್ಛತಾ ಕಾರ್ಯವನ್ನು ಗಡಿ ಶ್ರೀ ಚಾಮುಂಡಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ತಂಡ ಯುವ ಬ್ರಿಗೇಡ್ ಸಹಯೋಗದೊಂದಿಗೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಕಾಡಿನೊಳಗೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕಸಗಳು ಪೂಜಾ ಸಾಮಗ್ರಿಗಳು ಪತ್ತೆಯಾದವು. ಸುಂದರ ಪ್ರಕೃತಿಯ ಕಾಡಿನೊಳಗೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕಸಗಳು ತುಂಬಿ ತುಳಿಕುತಿವೆ. ಅವುಗಳಿಂದಲೇ ಕಾಡಾಗಿದೆಯೋ ಅನ್ನುವಷ್ಟರ ಮಟ್ಟಕ್ಕೆ ನಮ್ಮ ಪ್ರಕೃತಿಯು ಹಾನಿಯಾಗಿರುವುದು ತುಂಬಾ ಬೇಸರದ ಸಂಗತಿಯಾಗಿದೆ.
ಅರಣ್ಯ ಇಲಾಖೆಯವರ ಅಧೀನದಲ್ಲಿ ಇರುವ ಈ ದೇವಾಲಯದ ಬಗ್ಗೆಗಿನ ಬೇಜವಾಬ್ದಾರಿ ಎಷ್ಟರ ಮಟ್ಟಿಗೆ ಇದೆ ಎಂಬುದು ಕಾಡಿನೊಳಗೆ ಶ್ರೀ ದೇವರ ಬೆಲೆ ಬಾಳುವ ಹಿತ್ತಾಳೆಯ ಪೂಜಾ ಸಾಮಗ್ರಿಗಳನ್ನು ಕಂಡಾಗಲೇ ಅರಿವಾಗುತ್ತದೆ.
ಯುವ ಬ್ರಿಗೇಡ್ ತಂಡ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೆಲವು ಗೋಣಿಚೀಲಗಳನ್ನು ಕೊಂಡುಹೋಗಿ ಸ್ವಚ್ಛತೆ ಮಾಡಿದರು. ನಂತರ ‘ಮದ್ಯಕುಡಿದು ಈ ನಮ್ಮ ಸುಂದರ ಪ್ರಕೃತಿಯಲ್ಲಿ ಬಾಟಲಿಗಳನ್ನು ಎಸೆಯಲು ಬಿಡಬೇಡಿ, ಕನಿಷ್ಟ ಪಕ್ಷ ಈ ಗೋಣಿಚೀಲಕ್ಕೆ ಹಾಕಿಸಿ, ನಾವು ಅದನ್ನು ಕೊಂಡು ಹೋಗುತ್ತೇವೆ’ ಎಂದು ಮಾತು ಕೊಟ್ಟರು.