Wednesday, January 22, 2025
ಸುದ್ದಿ

ಮುಗೇರಡ್ಕ ಹಾಗೂ ವಳಾಲು ಗ್ರಾಮದ ಸಂಪರ್ಕಕ್ಕೆ ಬೋಟ್ ವ್ಯವಸ್ಥೆ ಮಾಡಿಕೊಟ್ಟ ಶಾಸಕ ಪೂಂಜ ಹಾಗೂ ಮಠಂದೂರು – ಕಹಳೆ ನ್ಯೂಸ್

ಇತ್ತೀಚಿಗೆ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮುಗೇರಡ್ಕ ಹಾಗೂ ವಳಾಲು ಇದರ ಸಂಪರ್ಕವಾಗಿದ್ದ ಮುಗೇರಡ್ಕ ತೂಗು ಸೇತುವೆ ಕೊಚ್ಚಿಹೋಗಿತ್ತು. ಈ ಸೇತುವೆಯಿಂದಲೇ ನೂರಾರು ವಿದ್ಯಾರ್ಥಿಗಳು, ದಿನನಿತ್ಯ ನೂರಾರು ಲೀಟರ್ ಹಾಲು ಡೈರಿಗೆ ಹಾಕುವವರು, ದಿನನಿತ್ಯದ ಕೆಲಸಕ್ಕೆ ಹೋಗುವವರು ಈ ಸೇತುವೆಯನ್ನೇ ಅವಲಂಬಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದಿನನಿತ್ಯದ ಓಡಾಟಕ್ಕೆ ಈಗ ಪರ್ಯಾಯ ವ್ಯವಸ್ಥೆ ಲಭ್ಯವಾಗಿದೆ. ಶಾಸಕರಾದ ಸಂಜೀವ ಮಠಂದೂರು ಹಾಗೂ ಹರೀಶ್ ಪೂಂಜ ಮೋಟಾರ್ ಬೋಟಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸಚಿವ ಶ್ರೀನಿವಾಸ ಪೂಜಾರಿಯವರ ಸಹಕಾರದೊಂದಿಗೆ ಮುರುಡೇಶ್ವರದಿಂದ ಬೋಟ್ ತರಿಸಿಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಅಂತೆಯೇ ಶಾಶ್ವತ ಸೇತುವೆಯೇ ಆಗಬೇಕೆಂದು ಊರಜನರು ಆಗ್ರಹಿಸಿದ್ದಾರೆ.