Thursday, January 23, 2025
ಸುದ್ದಿ

ಬಂಟ್ವಾಳ ತಾಲೂಕಿನ್ಯಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ಪ್ರಕರಣ – ಕಹಳೆ ನ್ಯೂಸ್

ಬಂಟ್ವಾಳ: ಬಾಲ್ಯ ವಿವಾಹ ಕಾನೂನಿನಲ್ಲಿ ಅಪರಾಧ ಎಂದು ಗೊತ್ತಿದ್ದರೂ ಕೂಡಾ ಮದುವೆ ಮಾಡಿಸುವ ಕುಟುಂಬಗಳು ಈ ಶತಮಾನದಲ್ಲೂ ಇದೆ ಎಂಬುದಕ್ಕೆ ತಾಲ್ಲೂಕಿನಲ್ಲಿ ಒಂದೇ ತಿಂಗಳಿನಲ್ಲಿ ಬೆಳಕಿಗೆ ಬಂದ ಎರಡು ಪ್ರಕರಣಗಳು ಸಾಕ್ಷಿಯಾಗಿದೆ.

ಆಗಸ್ಟ್ 19ರಂದು ನಾವೂರ ಗ್ರಾಮದಲ್ಲಿ ಬಾಲ್ಯವಿವಾಹದ ನಿಶ್ಚಿತಾರ್ಥಕ್ಕೆ ಬ್ರೇಕ್ ಹಾಕಿದ್ದ ಅಧಿಕಾರಿಗಳು, ವಿಟ್ಲ ಸಿ.ಡಿ.ಪಿ.ಒ.ಕಚೇರಿಗೆ ಬರುವ ವಿಟ್ಲ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ಪ್ರಕರಣಕ್ಕೆ ತಡೆ ಹಿಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗಸ್ಟ್ 23ಕ್ಕೆ ಕೃಷ್ಣ ಜನ್ಮಾಷ್ಟಮಿ ದಿನದಂದು ಬೊಳಂತೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಗೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸುವ ತಯಾರಿ ನಡೆಸಿದ್ದರು. ಬಾಲಕಿಗೆ 17 ವರ್ಷ 6 ತಿಂಗಳು ತುಂಬುತ್ತಿರುವಾಗಲೇ ಮದುವೆ ಮಾಡಲು ಪೂರ್ವತಯಾರಿಯಲ್ಲಿದ್ದ ಕುಟುಂಬ ಅ.23 ಮನೆಯಲ್ಲಿ ನಿಶ್ಚಿತಾರ್ಥ ಮಾಡುವ ತಯಾರಿಯಲ್ಲಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಗಳು ಮನೆಗೆ ಧಾವಿಸಿ ಹುಡುಗಿಗೆ 18 ವರ್ಷ ತುಂಬದೆ ನಿಶ್ಚಿತಾರ್ಥ ಕೂಡಾ ಕಾನೂನಿನ ಪ್ರಕಾರ ಅಪರಾಧವಾಗುವುದರಿಂದ ನಿಶ್ಚಿತಾರ್ಥವನ್ನು ನಿಲ್ಲಿಸುವಂತೆ ಹೇಳಿದರು.

ಬಳಿಕ 18 ವರ್ಷ ತುಂಬುವರಗೆ ಮದುವೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ ಎಂಬ ಬಗ್ಗೆ ಮುಚ್ಚಳಿಕೆ ಬರೆಯಿಸಿದ್ದಾರೆ.

ಬೆರಳೆಣಿಕೆಯ ಕೆಲವೊಂದು ಕುಟುಂಬಗಳ ಪ್ರಕರಣಗಳು ಬೆಳಕಿಗೆ ಬಂದರೆ, ಅನೇಕ ಪ್ರಕರಣಗಳು ಇನ್ನೂ ಕೂಡಾ ಬೆಳಕಿಗೆ ಬಾರದೆ ಮದುವೆ ನಡೆದಿರಬಹುದು.