Thursday, January 23, 2025
ಸುದ್ದಿ

ಮರ್ಧಾಳ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 23ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ – ಕಹಳೆ ನ್ಯೂಸ್

ಮರ್ಧಾಳ: ಶ್ರೀಕೃಷ್ಣ ಹಾಗೂ ಪ್ರಭು ಶ್ರೀರಾಮಚಂದ್ರ ಸ್ವಾಮಿಯು ಭೂಮಿಯ ಉದ್ಧಾರಕ್ಕಾಗಿ ಜನ್ಮ ತಾಳಿದ್ದಾರೆ. ಅವರಂತಹ ಮಹಾಪುರುಷ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮಾತೆಯರಲ್ಲಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಮರ್ಧಾಳ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಆಶ್ರಯದಲ್ಲಿ ನಡೆದ 23ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮರೋಪ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಇಂದು ನಮ್ಮ ಮನೆಯ ಮಕ್ಕಳಿಗೆ ನಮ್ಮ ಧರ್ಮದ ವಿಚಾರ ತಿಳಿಸುವ ಕೆಲಸ ಕಡಿಮೆಯಾಗಿದೆ.ಶ್ರೀಕೃಷ್ಣ ಶ್ರೀರಾಮನಂತಹ ಪುರುಷರು ಭೂಮಿಯಲ್ಲಿ ಧರ್ಮದ ಸಂರಕ್ಷಣೆಗೆ ಜನ್ಮತಾಳಿದ್ದಾರೆ. ಅವರ ಬದುಕಿನ ದಾರಿಯನ್ನು ನಮ್ಮ ಮನೆಗಳಲ್ಲಿ ಮಕ್ಕಳಿಗೆ ತಿಳಿಸಿ ಮಕ್ಕಳಲ್ಲಿ ಶ್ರೀಕೃಷ್ಣ ಶ್ರೀರಾಮಚಂದ್ರರನ್ನು ಮಾತೆಯರು ಕಾಣಬೇಕು. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಖುಷಿಪಡಿಸುವ ಬದಲು ಭಗವದ್ಗೀತೆ, ರಾಮಾಯಣ, ಮಹಾಭಾರತ,ಉಪನಿಷತ್ತುಗಳನ್ನು ನೀಡುವ ಕೆಲಸವಾಗಬೇಕೆಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಧಾರ್ಮಿಕ ಮುಂದಾಳು ವಾಸುದೇವ ಗೌಡ ಕೊಲ್ಲೆಸಾಗು ಮಾತನಾಡಿ ಇಂತಹ ಗ್ರಾಮೀಣ ಭಾಗದಲ್ಲಿ ಪುಟಾಣಿಗಳಿಗೆ ಕೀಡಾಕೂಟ ಏರ್ಷಡಿಸುವ ಜೊತೆಗೆ ಮಕ್ಕಳಿಗೆ ಧರ್ಮದ ಶಿಕ್ಷಣ, ನಮ್ಮ ಪರಂಪರೆಯನ್ನು ತಿಳಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಜಾಗೃತವಾಗಬೇಕು ಎಂದರು.
ಭಾರತೀಯ ಭೂಸೇನೆ ಯೋಧ ರವಿರಾಮ್ ಶೆಟ್ಟಿ ಜೈನರಪಟ್ಟೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮನೋಹರ ರೈ ಅಲಿಮಾರ್ ಪಟ್ಟೆ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕೇನ್ಯ, ಕಾರ್ಯದರ್ಶಿ ಪವನ್ ಕೇನ್ಯ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕೋಡಂದೂರು ಸ್ವಾಗತಿಸಿ, ಉಮೇಶ್ ಬ್ರಹ್ಮಶ್ರೀ ವಂದಿಸಿದರು. ತಿರುಮಲೇಶ್ವರ ಕೊಲ್ಯ ವಿಜೇತರ ಪಟ್ಟಿಯನ್ನು ವಾಚಿಸಿದರು. ಉದಯಕುಮಾರ್ ರೈ ಶಿವಾಜಿನಗರ ಕಾರ್ಯಕ್ರಮ ನಿರೂಪಿಸಿದರು.