Monday, November 25, 2024
ಸುದ್ದಿ

ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ – ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ – ಕಹಳೆ ನ್ಯೂಸ್

ಕನ್ಯಾನ: “ಬದುಕನ್ನು ನಾವು ಪ್ರೀತಿಸಬೇಕು; ಆಗ ಬದುಕು ನಮ್ಮನ್ನು ಪ್ರೀತಿಸುತ್ತದೆ. ಈ ಬಗ್ಗೆ ಚಿಂತನೆ ಮಾಡಿದರೆ ಆದರ್ಶ ಬದುಕು ನಮ್ಮದಾಗುತ್ತದೆ. ವಿದ್ಯೆಯೆ ಶ್ರೇಷ್ಠವಾದ ಸಂಪತ್ತು. ವಿದ್ಯೆಯೊಂದಿಗೆ ವಿನಯವು ಮನೆ ಮಾಡಿರಬೇಕು. ಬದುಕು ಕೌಶಲ್ಯಯುತವಾಗಿದ್ದು, ‘ಸ್ಕಿಲ್’ ಎಂಬುದು ‘ಸ್ಟಿಲ್’ ಆಗಿರದೆ ನಿರಂತರತೆಯಿಂದರಲಿ. ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಆದರ್ಶವಾಗಿರಬೇಕು” ಎಂದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ 2019-20ನೇ ಸಾಲಿನ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನಗೈದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಧ್ವಿ ಶ್ರೀ ಮಾತಾನಂದಮಯಿಯವರು “ವ್ಯಕ್ತಿ ಸರಿಯಾಗಿ ಸಂಸ್ಕಾರಯುತ ಪ್ರಾಮಾಣಿಕತೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ಅದು ರಾಷ್ಟ್ರದ ಸಂಪತ್ತಾಗುತ್ತದೆ. ಉತ್ತಮ ನಡವಳಿಕೆಗಳನ್ನು ಜೀವನದಲ್ಲಿ ಅಳವಡಿಸಿದಾಗ ತನ್ನಿಂದ ತಾನೆ ಸಮೃದ್ಧ ಸಮಾಜ ನಿರ್ಮಾಣವಾಗುತ್ತದೆ. ಯಾಂತ್ರಿಕ ಯುಗಕ್ಕೆ ನಮ್ಮ ಬದುಕನ್ನು ಹೊಂದಿಕೊಂಡು ಜೀವಿಸುವುದು ಅನಿವಾರ್ಯವಾಗಿದೆ” ಎಂದು ಆಶೀರ್ವಚನಗೈದು ಐ.ಟಿ.ಟಿ.ಯ ಪ್ರಾಂಶುಪಾಲರು, ತರಬೇತುದಾರರ ಕ್ರಿಯಾಶೀಲ ಮತ್ತು ಶ್ರದ್ಧೆಯ ಸೇವೆಯನ್ನು ಕೊಂಡಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಕರೋಪಾಡಿ ಗ್ರಾಮ ಪಂಚಾಂಯತ್ ಅಧ್ಯಕ್ಷೆ ಬೇಬಿ ಆರ್.ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ|| ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಮುಖ್ಯೋಪಾಧ್ಯಾಯ ಎ. ಜಯಪ್ರಕಾಶ ಶೆಟ್ಟಿ, ಹಿರಿಯ ಪತ್ರಕರ್ತ ಯಶವಂತ ವಿಟ್ಲ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಲಿಂಗಪ್ಪ ಗೌಡ ಪನೆಯಡ್ಕ, ಶ್ರೀಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ತರಬೇತು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಪೂಜ್ಯ ಶ್ರೀಗಳವರು ವಿತರಿಸಿದರು. ಐ.ಟಿ.ಐ.ಯ ದ್ವಿತೀಯ ವರ್ಷದ ವಿದ್ಯಾರ್ಥಿಗಳು ನೂತನವಾಗಿ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ಸಂಸ್ಥೆಯ ಪ್ರಾಚಾರ್ಯ ಕರುಣಾಕರ ಎನ್.ಬಿ. ಪ್ರಸ್ತಾವನೆಗೈದು, ಸಿಬ್ಬಂದಿ ಮೋಹನ್ ಸ್ವಾಗತಿಸಿದರು, ಪ್ರವೀಣ್ ಕುಮಾರ್ ವಂದಿಸಿದರು. ಶ್ರೀ ಜಯಂತ ಆಜೇರುರವರು ಕಾರ್ಯಕ್ರಮ ನಿರೂಪಿಸಿದರು.