ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಸಿ ಏರ್ ಪೋರ್ಟ್ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಹಸಿರು ನಿಶಾನೆ ತೋರಿಸಿದೆ.
ಬೆಂಗಳೂರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದ ರಸ್ತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡುವ ಕುರಿತು ಬಿಬಿಎಂಪಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮನವಿ ಕೊಟ್ಟಿತ್ತು. ರಸ್ತೆ ನಿರ್ಮಿಸಲು ಒಟ್ಟು 50 ಟನ್ ಪ್ಲಾಸ್ಟಿಕ ನ್ನು ನೀಡುವಂತೆ ಬಿಬಿಎಂಪಿಗೆ ಕೆಐಎ ಕೋರಿತ್ತು.
ನೂತನ ಟರ್ಮಿನಲ್ 2ರಲ್ಲಿ 50 ಲೇನ್ ಕಿ.ಮೀ. ರಸ್ತೆ ನಿರ್ಮಾಣಕ್ಕೆ 50 ಟನ್ ತ್ಯಾಜ್ಯ ಬಳಕೆ ಮಾಡಲಾಗುತ್ತಿದೆ. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಇಂದು ಕೆಐಎ ಅಧಿಕಾರಿಗಳಿಗೆ ಸಾಂಕೇತಿಕವಾಗಿ ಪ್ಲಾಸ್ಟಿಕ್ ಹಸ್ತಾಂತರ ಮಾಡಿದರು. ಡಾಂಬರ್ ಜೊತೆಗೆ ಶೇ. 6ರಿಂದ 8ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಲು ಬಿಐಎಎಲ್ ನಿರ್ಧಾರ ಮಾಡಿದೆ.