Recent Posts

Sunday, January 19, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಆಡಳಿತ ಸಂಘದ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ವಾಣಿಜ್ಯ ಹಾಗೂ ಆಡಳಿತ ಸಂಘದ ಉದ್ಘಾಟನ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರಮ, ಅರ್ಪಣಾ ಭಾವ, ಛಲ ಬಿಡದ ಪ್ರಯತ್ನಗಳಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಓದಿನ ನಂತರ ಇಂತಹದೇ ನಿರ್ದಿಷ್ಟ ಕೆಲಸವನ್ನು ಅರಸಿ ಕೂರಬಾರದು. ಬದಲಾಗಿ ಸಿಗುವ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಆಗ ಮಾತ್ರ ಏನಾದರು ಹೊಸತನ್ನು ಸಾಧಿಸಲು ಸಾಧ್ಯ. ಇಂದು ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ವಿಷಯನ್ನು ಕಲಿಯಲು ಅರಸಿ ಬರುತ್ತಿದ್ದಾರೆ. ಅದಕ್ಕೆ ಮಾರುಕಟ್ಟೆಯ ವ್ಯವಹಾರದಲ್ಲಿ ಹೆಚ್ಚುತ್ತಿರುವ ಬೇಡಿಕೆಯೇ ಕಾರಣ. ಆದರೆ ಇಲ್ಲಿ ಕೌಶಲ್ಯ ಅಗತ್ಯವಾಗಿದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲೇ ವೃತ್ತಿ ಜೀವನಕ್ಕೆ ಬೇಕಾಗುವ ಚಾಕಚಕ್ಯತೆಗಳನ್ನು ಕೌಶಲ್ಯವನ್ನು ಅಳವಡಿಸಿಕೊಂಡು ಮುಂದುವರಿಯುವುದು ಅನಿವಾರ್ಯ ಎಂದು ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಪದ್ಮನಾಭ ನೆಟ್ಟಾರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಂಕರನಾರಾಯಣ ಭಟ್ ಮಾತನಾಡಿ, ಕಾಲೇಜಿನ ಜೀವನದಲ್ಲಿ ಪಠ್ಯ-ಪುಸ್ತಕಗಳಲ್ಲಿರುವ ಪಾಠಕ್ಕಿಂತ ಹೊರತಾಗಿ ಏನನ್ನು ಕಲಿಸಲಾಗುತ್ತದೊ ಅದು ಜೀವನಕ್ಕೆ ಬಹಳ ಮುಖ್ಯವಾಗಿರುವುದು. ಕೃಷಿಯನ್ನೂ ಒಳಗೊಂಡಂತೆ ಎಲ್ಲಾ ವೃತ್ತಿಗಳಗೂ ನೈಪುಣ್ಯತೆಯ ಅವಶ್ಯಕತೆ ಇದೆ. ಅವುಗಳಿಗೆ ಕಾಲೇಜುಗಳಲ್ಲಿ ಕಲಿಸುವ ಇತರೆ ವಿಚಾರಗಳು ಸಹಾಯವಾಗುತ್ತದೆ. ಉನ್ನತ ವ್ಯಕ್ತಿಯಾಗಿ ಬೆಳೆಯಲು ಬಯಸುವವರು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟ್ರಮಣ ಭಟ್ ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರಾದ ಅನುಷಾ, ಶ್ರೀಲಕ್ಷ್ಮಿ, ಕೃತಿ, ಅಪೇಕ್ಷ ಪ್ರಾರ್ಥಿಸಿದರು. ಶಾಲಿನ್ ದೀಕ್ಷಾ ಬಾಸ್ಕೊ ಸ್ವಾಗತಿಸಿದರು. ಕೃಪಾ ವಂದಿಸಿದರು. ಜ್ಞಾನೇಶ್ ಕೆ.ಬಿ. ನಿರೂಪಿಸಿದರು.