Recent Posts

Sunday, January 19, 2025
ಸುದ್ದಿ

ಪುತ್ತೂರು: ಇಬ್ಬರು ಹೆಂಡಿರ ಮುದ್ದಿನ ಗಂಡನಿಂದ ಹಲ್ಲೆ; ಪತ್ನಿಯರಿಂದ ಕೇಸು ದಾಖಲು,ಠಾಣೆಯಲ್ಲಿ ರಾಜಿ- ಕಹಳೆ ನ್ಯೂಸ್

ಪುತ್ತೂರು: ಸರ್ವೆಯ ನರಿಮೊಗರು ಗ್ರಾಮದ ವಿಶ್ವನಾಥ ಗೌಡ(45) ಎಂಬಾತ ಒಂದೇ ಮನೆಯ ಇಬ್ಬರು ಹೆಂಗಸರನ್ನು ಮದುವೆಯಾಗಿ ಇದೀಗ ಅವರಿಗೆ ಕಿರುಕುಳ ನೀಡಿದ್ದಾಗಿ ಪ್ರಕರಣ ದಾಖಲಾಗಿತ್ತು.
ವಿಶ್ವನಾಥ ಗೌಡ ಎಂಬಾತನು ಸುಮಾರು 10ವರ್ಷದ ಹಿಂದೆಯೇ ಯಶೋದಾ ಎಂಬಾಕೆಯನ್ನು ಮದುವೆಯಾಗಿದ್ದು ನಂತರ ಮೊದಲನೇ ಹೆಂಡತಿಯ ಸಹೋದರಿಯಾದ ಅಮಿತಾ ಎಂಬಾಕೆಯನ್ನು ಎರಡನೇ ವಿವಾಹವಾಗಿರುತ್ತಾನೆ.
ಈ ಹಿಂದೆಯಿಂದಲೇ ತನ್ನ ಎರಡೂ ಹೆಂಡತಿಯರಿಗೂ ಕಿರುಕುಳ ನೀಡುತ್ತಿದ್ದು ನಿನ್ನೆ ರಾತ್ರೆ 9ಗಂಟೆ ಸುಮಾರಿಗೆ ವಿಶ್ವನಾಥ ಗೌಡನು ತನ್ನ ತಾಯಿ ಲಕ್ಷ್ಮಿ(62) ಜೊತೆ ಸೇರಿ ಮನಸೋಇಚ್ಛೆ ಹಲ್ಲೆ ನಡೆಸಿ ಕೈ ಕಾಲು ಮುರಿಯುವಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಯಶೋಧಾ ಮತ್ತು ಅಮಿತಾ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ಇದೀಗ ಪ್ರಕರಣವು ರಾಜಿ ಪ್ರಕ್ರಿಯೆಮೂಲಕ ಠಾಣೆಯಲ್ಲೇ ಇತ್ಯರ್ಥಗೊಂಡಿದೆ ಎಂದು ಮಹಿಳಾ ಠಾಣಾಧಿಕಾರಿ ಶೇಸಮ್ಮ ತಿಳಿಸಿರುತ್ತಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು