Recent Posts

Sunday, January 19, 2025
ಸುದ್ದಿ

ಚೊಕ್ಕಾಡಿಯ ನೀಲಮ್ಮ ತಾಯಿಯ ಜೀವನಕ್ಕೆ ಮರಾಟಿ ಸಮಿತಿಯ ಸಹಾಯ – ಕಹಳೆ ನ್ಯೂಸ್

ಸುಳ್ಯ : ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ನೆನಾರು ಸಮೀಪ ಅರಣ್ಯದ ತಪ್ಪಲಿನಲ್ಲಿ ನೀಲಮ್ಮಾ ಎಂಬ 85 ವರ್ಷ ತಾಯಿ ವಾಸಿಸುತ್ತಿದ್ದಾರೆ. ಆದರೆ ಅವರ ಬದುಕಿಗೆ ಬೇಕಾದ ಮೂಲಭೂತ ಸೌಲಭ್ಯಗಳೇ ಇಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಷಯ ತಿಳಿದ ತಕ್ಷಣ ದ. ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಭೇಟಿ ನೀಡಿದಾಗ ಸಮಸ್ಯೆಗಳ ಸುರಿಮಳೆಯನ್ನೇ ಹೊರಹಾಕಿ ಕಣ್ಣೀರು ಇಟ್ಟ 85 ವರ್ಷದ ನೀಲಮ್ಮ ತಾಯಿ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಇನ್ನೊಂದು ಅವಿವಾಹಿತ 50 ವರ್ಷದ ಮಗಳೊಂದಿಗೆ 15 ವರ್ಷದ ಮೊದಲೇ ಪ್ಲಾಸ್ಟಿಕ್ ಚಾವಣಿಯ ಮನೆಯ ಯಲ್ಲಿ ವಾಸಿಸುತ್ತಿದ್ದು, ಅರಣ್ಯ ಪ್ರದೇಶದಲ್ಲಿ ದಿನಾಲೂ ಮನೆಯ ಪಕ್ಕದಲ್ಲಿಯೇ ಓಡಾಡುತ್ತಿರುವ ಕಾಡುಹಂದಿ, ಹಾವು ಇತರ ಕಾಡು ಪ್ರಾಣಿಗಳು. ಇಲ್ಲಿ ವಾಸಿಸಲು ಅದು ಬಹಳ ಭಯಾನಕ.

ಇಂತಹ ಕಷ್ಟದ ತಾಯಿಯ ಬದುಕಿನ ಮನೆಯ ಮಾಹಿತಿ ಬಂದ ಎರಡು ದಿನದಲ್ಲಿ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸುಳ್ಯ ತಾಲೂಕಿನ ಘಟಕ ಅಧ್ಯಕ್ಷರ ನೇತೃತ್ವದಲ್ಲಿ ಇತರ ಸಂಘಟಕರೊಂದಿಗೆ ಮನೆಗೆ ಭೇಟಿ ನೀಡಿದರು.

ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಸರ್ಕಾರಿ ಅಧಿಕಾರಿಗಳಿಗೆ ನೇರವಾಗಿ ಮಾತಾನಾಡಿ , ಮರುದಿನವೇ ಆ ವ್ಯಾಪ್ತಿಯ ಗ್ರಾಮ ಪಂಚಾಯತಿಯಿಂದ ತಾಯಿಗೆ ಬೇಕಾದ ಸರಕಾರದ ಸವಲತ್ತುಗಳನ್ನು ತಕ್ಷಣವೇ ಒದಗಿಸಬೇಕೆಂದು ತನ್ನ ದಾಖಲೆಗಳನ್ನು ಸಲ್ಲಿಸಲು ಸಮಿತಿ ಯಶಸ್ವಿಯಾಗಿದೆ.

ತಾಯಿಗೆ ಸಿಗುವವಂತಹ ಸರ್ಕಾರದ ಸವಲತ್ತುಗಳು ಹೊಸ ಮನೆ ದೊರಕಿಸಿಕೊಡುವಲ್ಲಿ ಜಿಲ್ಲಾ ಸಂರಕ್ಷಣಾ ಸಮಿತಿ ಪೂರ್ಣವಾಗಿ ಹೋರಾಡಲಿದೆ.