Recent Posts

Monday, January 20, 2025
ಸುದ್ದಿ

ಟೈಯರ್ ಸ್ಟೋಟಗೊಂಡು ಕ್ಯಾಂಟರ್ ಪಲ್ಟಿ – ಕಹಳೆ ನ್ಯೂಸ್

ನರಸಾಪುರ: ಟೈಯರ್ ಸ್ಟೋಟಗೊಂಡು ಕ್ಯಾಂಟರ್ ಪಲ್ಟಿಯಾದ ಘಟನೆ ನರಸಾಪುರದ ಬೆಳ್ಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಚೆಳ್ಳಕೆರೆಯಿಂದ ಕೋಲಾರಕ್ಕೆ ಆಗಮಿಸುತ್ತಿದ್ದ ಕ್ಯಾಂಟರ್‍ ನ ಟೈರ್ ಮಾರ್ಗ ಮಧ್ಯೆ ಸ್ಪೋಟಗೊಂಡಿದೆ. ಟೊಮೆಟೊ ಹೊತ್ತು ಕೋಲಾರ ಮಾರುಕಟ್ಟೆಗೆ ಹೊಗುತ್ತಿದ್ದ ಕ್ಯಾಂಟರ್‍ ನಲ್ಲಿದ್ದ, ಟೋಮೋಟೊ ಮತ್ತು ಕ್ಯಾಂಟರ್ ರಸ್ತೆಯಲ್ಲಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯಲ್ಲಿ ಕ್ಯಾಂಟರ್‍ ನಲ್ಲಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ವಾಹನಗಳು ಚಲಿಸಲು ಮಾರ್ಗ ಬದಲಿಸಿ ಪ್ರಯಣಕ್ಕೆ ದಾರಿ ಮಾಡಿಕೊಟ್ಟರು. ವೇಮಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು