Recent Posts

Monday, January 20, 2025
ಸುದ್ದಿ

ಅಮೆರಿಕಾದಲ್ಲಿ ಬೆಳ್ತಂಗಡಿಯ ಪರ್ವತಾರೋಹಿ ದುರ್ಮರಣ– ಕಹಳೆ ನ್ಯೂಸ್

ಮಂಗಳೂರು: ಅಮೆರಿಕದಲ್ಲಿ ನೆಲೆಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ನಿವಾಸಿ ಚೈತನ್ಯ ಸಾಠೆ (36) ಅವರು ಪರ್ವತಾ ರೋಹಣ ಸಂದರ್ಭದಲ್ಲಿ ಪ್ರಪಾತಕ್ಕೆ ಬಿದ್ದು, ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಶನಿವಾರ 24ರಂದು ಅಮೇರಿಕಾದ ಮೌಂಟ್ ಹುಡ್ ಲೋವರ್ ಜಾರ್ಜ್‍ನ ಟೆರ್ರಾಬಾನ್ ವ್ಯಾಪ್ತಿಯ ಸ್ಮಿತ್ ರಾಕ್ ಸ್ಟೇಟ್ ಪಾರ್ಕ್ ಎಂಬಲ್ಲಿ ಸುಮಾರು 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಹಿರಿಯ ವಿಜ್ಞಾನಿ ರಮೇಶ್ ಸಾಠೆ ಅವರ ಪುತ್ರ ಚೈತನ್ಯ ಸಾಠೆ ಅವರು ಪೋರ್ಟ್ ಲ್ಯಾಂಡ್ ಮೂಲದ ಮಾಝಾಮಾಸ್ ಎಂಬ ಪರ್ವತಾರೋಹಿ ಸಂಘಟನೆಯಲ್ಲಿದ್ದು, ಅನೇಕ ಸಾಹಸಮಯ ಚಾರಣಗಳಲ್ಲಿ ಪಾಲ್ಗೊಂಡಿದ್ದರು.