ಸುಬ್ರಹ್ಮಣ್ಯ: ರಾಜ್ಯದ ವಿವಿಧೆಡೆ ಪ್ರವಾಹದಿಂದ ನೆರೆ ಬಂದು ವಿವಿಧ ಭಾಗದ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ನೆರೆಯಿಂದ ಸಂತ್ರಸ್ತರಾದವರ ನೆರವಿಗೆ ಸಂಘ ಸಂಸ್ಥೆ. ಮಠ ಮಂದಿರಗಳು ಮುಂದಾಗಿದ್ದು ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಿಂದಲೂ ನೆರೆ ಸಂತ್ರಸ್ಥರಿಗೆ ಇದುವರೆಗೆ ಎರಡು ಹಂತದಲ್ಲಿ ಸುಮಾರು 10 ಲಕ್ಷರೂ ವರೆಗಿನ ಸಾಮಾಗ್ರಿಗಳನ್ನು ವಿತರಿಸಲಾಗಿದೆ.
ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಂತೆ ಸುಬ್ರಹ್ಮಣ್ಯ ಮಠದಿಂದ ನೇರ ಹಾಗೂ ಬೆಂಗಳೂರು ಶಾಖೆ ಮೂಲಕ ಎರಡು ಕಂತುಗಳಲ್ಲಿ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿ ಕೊಟ್ಟು ವಿತರಿಸಲಾಗಿದೆ.
ನೆರೆ ಪೀಡಿತ ರಾಮದುರ್ಗಾದ 200 ಕುಟುಂಬಗಳಿಗೆ ಹಾಗೂ ಹಂಪಿಯೋಲಿಯ 300 ಕುಟುಂಬಗಳಿಗೆ ಆಹಾರ, ಹೊದಿಕೆ ಇನ್ನಿತರ ಬಳಕೆಯ ಸಾಮಾಗ್ರಿಗಳನ್ನು ಸೋಮವಾರ ವಿತರಿಸಲಾಯಿತು. ಈ ಹಿಂದೆ ನೆರೆ ಪೀಡಿತ ಪ್ರದೇಶಗಳಿಗೆ 5 ಲಕ್ಷ ರೂ ಬೆಲೆ ಬಾಳುವ ಆಹಾರ ಮತ್ತು ಇನ್ನಿತರ ಬಳಕೆಯ ಸಾಮಾಗ್ರಿಗಳನ್ನು ವಿತರಿಸಲಾಗಿತ್ತು. ಪ್ರಾಕೃತಿಕ ವಿಕೋಪದಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದು ಅವರ ಕಷ್ಟಗಳಲ್ಲಿ ಮಠ ಕೂಡ ಭಾಗಿಯಾಗಿದ್ದು ರಾಜ್ಯದ ವಿವಿಧ ಭಾಗಗಳಿಗೆ ನೆರವನ್ನು ನೀಡಲಾಗುತ್ತಿದೆ ಎಂದು ಸುಬ್ರಹ್ಮಣ್ಯ ಶ್ರೀ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದರು.