ಪುತ್ತೂರು: ವಿವೇಕಾನಂದ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗ ಮತ್ತು ಐ.ಕ್ಯು.ಎ.ಸಿ.ಘಟಕದ ಆಶ್ರಯದಲ್ಲಿ ಮಾಹಿತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ನಡೆಯಿತು.
ಇತರೆ ಕಂಪೆನಿಗಳಿಗೆ ಹೋಲಿಸಿದರೆ ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಪ್ರಮಾಣಪತ್ರವು ಕೇವಲ ಗುರುತಿಗಷ್ಟೇ ಸೀಮಿತ. ವ್ಯಕ್ತಿಯಲ್ಲಿ ನೈಪುಣ್ಯತೆ ಇದ್ದರೆ ಉದ್ಯೋಗ ಖಚಿತ. ಕುಶಲತೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಇರಬೇಕು ನೈಪುಣ್ಯತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯ. ಎಷ್ಟು ಬೇಗ ಕೆಲಸ ಮುಗಿಸುತ್ತೇವೆಯೋ ಅಷ್ಟು ಆಕರ್ಷಿತರಾಗಲು ಸಾಧ್ಯ. ವರದಿ ಸಲ್ಲಿಸುವಿಕೆಯನ್ನು ಪರಿಪೂರ್ಣಗೊಳಿಸಬೇಕು ಮತ್ತು ಪ್ರತಿಭಾವಂತರಾಗಿದ್ದುಕೊಂಡು ಉದ್ಯೋಗ ಕ್ಷೇತ್ರಕ್ಕೆ ಬೇಕಾದ ನೈಪುಣ್ಯತೆಯನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ಎಂದು ಬೆಂಗಳೂರಿನ ಗಿವ್ ಆ್ಯಂಡ್ ಫಸ್ಟ್ ರೌಂಡ್ ಟ್ರೈನಿಂಗ್ ಸರ್ವಿಸ್‍ನ ಮುಖ್ಯಸ್ಥ ಶ್ರೀನಾಥ್ ಸೇತುರಾಮನ್ ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟರಮಣ ಭಟ್, ವಾಣಿಜ್ಯ ವಿಷಯವು ಉದ್ಯೋಗ ನೀಡುವ ಕ್ಷೇತ್ರ. ಯಾವುದೇ ಗುರಿಯನ್ನು ಸಾಧಿಸಲು ಜ್ಞಾನದೊಂದಿಗೆ ಕೌಶಲ್ಯವು ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಗೆಲುವನ್ನು ಪಡೆಯುವ ಮೊದಲು ಸೋಲಿನಿಂದ ಸೋಲನ್ನು ನೋಡಬೇಕು, ಆಗಲೇ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂದರು.
ತರಬೇತುದಾರೆ ನೈಜಾ ಆನಂದ್ ಮತ್ತಿತರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ರೇಖಾ ಸ್ವಾಗತಿಸಿದರು, ಉಪನ್ಯಾಸಕಿ ರವಿಕಲಾ ವಂದಿಸಿದರು. ವಿದ್ಯಾರ್ಥಿನಿ ಶಾಲಿನ್ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.